ತಾಯಿ- ಮಗು ವೃತ್ತದಲ್ಲಿ ಮಹಿಳಾ ದಿನಾಚರಣೆ

ಬೀದರ್: ಮಾ.9:ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿಯ ತಾಯಿ-ಮಗು ವೃತ್ತದಲ್ಲಿ ಕವಿಗೋಷ್ಠಿ ನಡೆಸುವ ಮೂಲಕ ಮಹಿಳಾ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಸಾಹಿತಿಗಳು, ಚಿಂತಕಿಯರು ಹೆಣ್ಣುಮಕ್ಕಳ ಕುರಿತು ಕವನ ವಾಚಿಸಿದರು. ಕಲಾವಿದೆ ರೇಖಾ ಅಪ್ಪಾರಾವ್ ಸೌದಿ, ಭಾನುಪ್ರಿಯಾ ಅರಳಿ ಗಾಯನ ಮಾಡಿದರು.

ಮಹಿಳೆಯರು ಪರಸ್ಪರ ಸಿಹಿ ಹಂಚಿ, ಬಣ್ಣವನ್ನೂ ಆಡಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್,
ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಿ.ಜೆ. ಪಾರ್ವತಿ ವಿ. ಸೋನಾರೆ, ಜಯದೇವಿ ಯದಲಾಪುರೆ, ಮಾಣಿಕಾದೇವಿ ಪಾಟೀಲ, ರೂಪಾ ಪಾಟೀಲ, ಸ್ವರೂಪಾ ನಾಗೂರೆ, ಜಯಶ್ರೀ ಸುಕಾಲೆ, ಪುಷ್ಪಾ ಕನಕ, ಮಹಾನಂದಾ ಪಾಟೀಲ, ಶಿಲ್ಪಾ ಮಜಗೆ, ಸುನಿತಾ ದಾಡಗಿ, ಕಸ್ತೂರಿ ಪಟಪಳ್ಳಿ, ರೇಣುಕಾ ಮಠ, ಧನಲಕ್ಷ್ಮಿ ಪಾಟೀಲ ಮೊದಲಾದವರು ಇದ್ದರು.