ತಾಯಿ, ಮಗು ಆರೋಗ್ಯದಿಂದ ಉತ್ತಮ ಸಮಾಜ ನಿರ್ಮಾಣ

ಪಿರಿಯಾಪಟ್ಟಣ: ಜ.06- ಗರ್ಭಿಣಿಯರು ಆಹಾರ ಸೇವನೆಯಲ್ಲಿ ಕಾಳಜಿ ವಹಿಸುವಂತೆ ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಸವಿತಾ ತಿಳಿಸಿದರು.
ತಾಲ್ಲೂಕಿನ ಬೆಕ್ಕರೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಹಾಗು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಮಗು ಹುಟ್ಟಿದ ನಂತರ ಕಡ್ಡಾಯ 6ತಿಂಗಳು ಮತ್ತು 2ವರ್ಷಗಳ ವರೆಗೆ ಎದೆ ಹಾಲು ಕುಡಿಸುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಎಂದರು.
ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಾಥ್ ಮಾತನಾಡಿ ಗರ್ಭಿಣಿಯರಿಗೆ ರಕ್ತಹೀನತೆ ಮತ್ತು ಅಪೌಷ್ಟಿಕತೆ ಸಮಸ್ಯೆ ದೊಡ್ಡ ಸವಾಲಾಗಿದ್ದು ಪೌಷ್ಠಿಕ ಆಹಾರ ಕಡ್ಡಾಯ ಸೇವಿಸಬೇಕು, ತಾಯಿ ಮಗು ಆರೋಗ್ಯವಾಗಿದ್ದಾರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಗ್ರಾ.ಪಂ ಸದಸ್ಯೆ ಜ್ಯೋತಿ ರವಿಕುಮಾರ್ ಮಾತನಾಡಿ ತರಕಾರಿ ಸೊಪ್ಪು ಸೇರಿದಂತೆ ಪೌಷ್ಟಿಕಾಂಶ ಹೆಚ್ಚಿರುವ ಆಹಾರವನ್ನು ಗರ್ಭಿಣಿಯರು ಸೇವಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಬೆಕ್ಕರೆ ಗ್ರಾಮದ ಗರ್ಭಿಣಿಯರಾದ ಕಾವ್ಯಆರಾಧ್ಯ, ಪೂರ್ಣಿಮಾ, ಸಂಧ್ಯಾ, ಮಂಜುಳಾ ಅವರಿಗೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಗ್ರಾ.ಪಂ ಮಾಜಿ ಸದಸ್ಯರಾದ ಅನುಸೂಯಾಭಾಸ್ಕರ್, ಮಾಲತಿಪಂಡಿತಾರಾಧ್ಯ, ಆರೋಗ್ಯ ಇಲಾಖೆ ಕಿರಿಯ ಸಹಾಯಕಿಯರಾದ ಸೌಮ್ಯ, ಗಾಯತ್ರಿ, ಅಂಗನವಾಡಿ ಕಾರ್ಯಕರ್ತೆಯರಾದ ರೂಪ, ಸರಸ್ವತಿ, ಆಶಾ ಕಾರ್ಯಕರ್ತೆ ವಸುಂಧರ, ಸಹಾಯಕಿ ಪಂಕಜಾ, ಗ್ರಾಮದ ಭವಾನಿಆರಾಧ್ಯ, ದ್ರಾಕ್ಷಾಯಿಣಿ, ಮಣಿ, ನೇತ್ರಾವತಿ, ಕುಸುಮಾ, ರಮ್ಯಸತೀಶಾರಾಧ್ಯ ಸೇರಿದಂತೆ ಹಲವರಿದ್ದರು.