ತಾಯಿ-ಮಗನ ಬರ್ಬರ ಹತ್ಯೆ

ಬೆಂಗಳೂರು,ಸೆ.೬-ತಾಯಿ ಮತ್ತಾಕೆಯ ಅಪ್ರಾಪ್ತ ಮಗ ಇಬ್ಬರನ್ನು ಜೋಡಿ ಕೊಲೆ ಮಾಡಿರುವ ನಗರವನ್ನು ಬೆಚ್ಚಿ ಬೀಳಿಸುವ ದಾರುಣ ಘಟನೆ ಬಾಗಲಗುಂಟೆಯ ರವೀಂದ್ರನಗರದಲ್ಲಿ ನಡೆದಿದೆ.ರವೀಂದ್ರನಗರದ ನವನೀತ (೩೫) ಮತ್ತಾಕೆಯ ಪುತ್ರ ಸೃಜನ್(೧೧) ಕೊಲೆಯಾದವರು,ಎರಡು ದಿನಗಳ ಹಿಂದೆ ನಡೆದ ಈ ಕೊಲೆ ತಡವಾಗಿ ಬೆಳಕಿಗೆ ಬಂದಿರುವ ಇವರಿಬ್ಬರ ಜೋಡಿ ಕೊಲೆಯ ಹಂತಕರನ್ನು ಎಂದು ಪತ್ತೆ ಹಚ್ಚಲು ವಿಶೇಷ ಪೊಲೀಸ್ ತಂಡಗಳನ್ನು ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರು ರಚಿಸಿದ್ದಾರೆ.
ತಾಯಿ ನವನೀತ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದರೆ, ಸೃಜನ್ ನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಇಬ್ಬರ ಮೃತದೇಹಗಳು ಹಾಸಿಗೆಯ ಮೇಲೆ ಬಿದ್ದಿದೆ.ಎರಡು ದಿನಗಳಿಂದ ಮನೆಯಿಂದ ನವನೀತ ಮತ್ತವರ ಪುತ್ರ ಸೃಜನ್ ಹೊರಬರದಿರುವುದನ್ನು ಗಮನಿಸಿದ ಸ್ಥಳೀಯರು ಮಾಹಿತಿಯನ್ನು ನೀಡಿದ ಕೂಡಲೇ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ.ಪತಿಯಿಂದ ದೂರವಾಗಿದ್ದ ಮಹಿಳೆ ನವನೀತ ಆಂಧ್ರಪ್ರದೇಶ ಮೂಲದವರಾಗಿದ್ದು, ಕಳೆದ ಮೂರು ವರ್ಷಗಳಿಂದ ರವೀಂದ್ರನಗರದಲ್ಲಿ ವಾಸವಿದ್ದರು. ಆದರೆ, ಅಕ್ಕಪಕ್ಕದವರ ಜತೆಗೆ ಹೆಚ್ಚೇನೂ ಸಂಪರ್ಕ ಇರಲಿಲ್ಲ ಎನ್ನಲಾಗಿದೆ.ಕೌಟುಂಬಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದರು ಎನ್ನಲಾಗಿದ್ದು, ಎರಡು ವರ್ಷಗಳಿಂದ ಪತಿಯಿಂದ ದೂರವಾಗಿ ವಾಸಿಸುತ್ತಿದ್ದಾರೆ.ಅವರು ಏನು ಕೆಲಸ ಮಾಡುತ್ತಿದ್ದರು ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿ ಪತಿ ಚಂದ್ರುವೇ ಕೊಂದಿರಬಹುದೆಂದು ಮೃತ ನವನೀತಾ ಕುಂಟುಂಬಸ್ಥರು ಅರೋಪಿಸಿದ್ದಾರೆ. ಚಂದ್ರುನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಬಾಗಲಗುಂಟೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.