ತಾಯಿ ದೇವರಾಗಬಹುದು ಆದರೆ ದೇವರು ತಾಯಿಯಾಗಲಾರ:ಶಿವರಾಜ ಅಂಡಗಿ

ಕಲಬುರಗಿ:ಮೇ.15:ತಾಯಿಗಿಂತ ದೊಡ್ಡ ದೇವರಿಲ್ಲ ನಮ್ಮಗೆ ಕಣ್ಣಿಗೆ ಕಾಣುವ ದೇವರೆಂದರೆ ಅದು ತಾಯಿ ತನಗಾಗಿ ಏನನ್ನು ಬಯಸದವಳು, ಕೂಡಿಡದವಳು, ತನಗಿಲ್ಲವೆಂದು ಕೊರಗದವಳು ನಾವು ಸೋತಾಗಾ ಸದಾ ನಮ್ಮ ಜೊತೆಗೆ ನಿಂತವಳು ನಮ್ಮ ನಗುವಲೇ ತನ್ನ ಖುಷಿ ಕಂಡವಳು ನಮ್ಮಗಾಗಿಯೇ ಈಡೀ ಜೀವನ ಮೀಸಲಿಟ್ಟವಳೇ ತಾಯಿ ಅವಳೇ ಅಮ್ಮ ಎನ್ನುತಾ ಪ್ರತಿ ದಿನವು ನಾವು ತಾಯಂದಿರಿಗೆ ಸ್ವಲ್ಪ ಸಮಯ ಕೊಟ್ಟು ಸೇವೆ ಸಲ್ಲಿಸಿದ್ದರೆ ಮಾತ್ರ ನಮ್ಮ ಜೀವನ ಸಾರ್ಥಕ ಎಂದು ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಬಿದ್ದಾಪೂರ ಕಾಲೋನಿಯಲ್ಲಿ ನಡೆದ “ವಿಶ್ವ ತಾಯಂದಿಯರ” ದಿನಾಚರಣೆಯಲ್ಲಿ ಮಾತನಾಡಿದ್ದರು.

ಸುಲೆಪೇಟ ಕುಟುಂಬದಲ್ಲಿ ಅತ್ಯಂತ ಹಿರಿಯ ತಾಯಿ ಶ್ರೀಮತಿ ಪಾರ್ವತಿ ಸುಲೆಪೇಟ ಅವರಿಗೆ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ವತಿಯಿಂದ ಸನ್ಮಾನಿಸಿ “ವಿಶ್ವ ತಾಯಂದಿಯರ” ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದಂರ್ಭದಲ್ಲಿ ನ್ಯಾಯವಾದಿಗಳಾದ ಚಂದ್ರಶೇಖರ ಸುಲೆಪೇಟ, ವಿನೋದಕುಮಾರ ಜನೇವರಿ, ಹಾಗೂ ಪ್ರಮುಖರಾದ ವಿಶ್ವನಾಥ ಸುಲೆಪೇಟ, ರೇವಣಸಿದ್ದಪ್ಪ ಮಾಲಿ ಪಾಟೀಲ, ಚಂದ್ರಶೇಖರ ಮ್ಯಾಳಿಗಿ, ಶಾಂತಾಬಾಯಿ, ನೀಲಮ್ಮಾ, ಮಹಾದೇವಿ, ಕಿರಣಕುಮಾರ, ಶರಣ ಪ್ರಸಾದ ಹಾಗೂ ಇತತರು ಉಪಸ್ಥಿತರಿದ್ದರು.