ತಾಯಿ ತಂದೆ ಸಮಾಜದ ಋಣ ತೀರಿಸಲಾಗದು : ಪ್ರದ್ಮಶ್ರೀ ಇಬ್ರಾಹಿಮ್ ಸುತಾರ

ಇಂಡಿ: ಡಿ.4:ತಂದೆ , ತಾಯಿ, ಸಮಾಜ, ನಿಸರ್ಗ, ಪರಮಾತ್ಮನ ಋಣ ತೀರಿಸಲಿಕ್ಕೆ ಆಗದು ಎಂದು ಪ್ರದ್ಮಶ್ರೀ ಪುರಸ್ಕøತ ಇಬ್ರಾಹಿಂ ಸುತಾರ ಯುವ ಜನಾಂಗಕ್ಕೆ ಮತ್ತು ಗ್ರಾಮಸ್ಥರಿಗೆ ಹೇಳಿದರು.

ತಾಲೂಕಿನ ಹಿರೇಬೇವನೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ನೂತನ ಜೀಣೋದ್ಧಾರ, ಕಳಸಾಹರೋಹಣ ಮತ್ತು ಧರ್ಮಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ತಾಯಿಯ ಕರುಣೆ, ಸಹನಶೀಲತೆ, ತಂದೆಯ ತ್ಯಾಗ, ಗುರುಗಳು ನೀಡಿದ ಶಿಕ್ಷಣ, ಸಮಾಜದ ಸಮಾನತೆ, ನಿಸರ್ಗದ ಸ್ವಚ್ಛತೆ ಯುವಕರಿಗೆ ಮಾದರಿ.

ತಾಯಿಗೆ ಮಹತ್ವದ ಸ್ಥಾನವಿದೆ. ತಂದೆ ಮಕ್ಕಳಿಗಾಗಿ ತನ್ನ ಜೀವನದುದ್ದಕ್ಕೂ ಪರಿಶ್ರಮ ಪಡುತ್ತಾರೆ, ಗುರುಗಳು ನರಜನ್ಮ ತೆಗೆದು ಹರ ಜನ್ಮ ನೀಡಿದವರು, ಗುರುಗಳು ಜಾತ್ಯಾತೀತ, ಮತ, ಪಂಥ, ಸಿದ್ದಾಂತ ಮೀರಿ ಬಾಳಿದವರು, ಜಗತ್ತಿನ ಜೀವಿಗಳ ಕಲ್ಯಾಣ ಬಯಸಿದವರು, ಸಮಾಜ ನಾವೆಲ್ಲರೂ ಒಂದೇ, ಸಹೋದರ ಭಾವನೆ ಮತ್ತು ಧರ್ಮ ಒಂದೇ ಆದರೆ ಆಚರಣೆ ಮಾತ್ರ ಭಿನ್ನ ಎಂದು ಸಾರುತ್ತಿದೆ, ನಿಸರ್ಗ ನಮಗೆ ನೀರು, ಭೂಮಿ, ಗಾಳಿ ನೀಡಿದೆ. ಅದರೆ ಅದರ ಸದುಪಯೋಗ ಮಾಡಿಕೊಳ್ಳಬೇಕಾಗಿದೆ. ಇದರಲ್ಲಿಯೇ ಭಾರತದ ಸಂಸ್ಕøತಿ ಅಡಗಿದೆ ಅದನ್ನು ಮುಂದು ವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಯುವ ಜನಾಂಗದ ಮೇಲಿದೆ.

ಇಂದು ಕೆಲವು ಸಮಾಜ ಘಾತುಕ ಶಕ್ತಿಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ. ತಂದೆ ತಾಯಿಯರನ್ನು ಮುಪ್ಪಿನ ಕಾಲದಲ್ಲಿ ಸೇವೆ ಮಾಡಬೇಕು. ತಾಯಿಯ ಪಾದದ ಕೆಳಗೆ ಸ್ವರ್ಗವಿದೆ ಎಂದು ಪ್ರತಿಯೊಂದು ಧರ್ಮದ ಗುರುಗಳು ಸಾರಿ ಸಾರಿ ಹೇಳುತ್ತಾರೆ. ಯುವಕರು ಮರೆತು ಹೋಗದೆ ಗೌರವ ನೀಡುವ ಗುಣ ಪಡೆದು ಒಳ್ಳೆಯವರಾದರೆ ನಮ್ಮ ಸಂಸ್ಕøತಿ ಜಗತ್ತಿಗೆ ಶ್ರೇಷ್ಠ ಸಂಸ್ಕøತಿಯಾಗಿ ಉಳಿಯಬಲ್ಲದು ಎಂದರು.

ಹಿರೇಬೇವನೂರ ಗ್ರಾಮದ ಮಲ್ಲಿಕಾರ್ಜುನ ಶಾಸ್ತ್ರೀಗಳು, ಸಿದ್ಧರಾಮೇಶ್ವರ ಕುರಿತು ಪ್ರವಚನ ನೀಡುತ್ತಿರುವ ಮಾತೋಶ್ರೀ ಅನುಸುಯಾ ತಾಯಿ, ದೇವಸ್ಥಾನ ಸಮಿತಿಯ ಅಧ್ಯಕ್ಷ ನಾಗಪ್ಪಗೌಡ ಬಿರಾದಾರ, ಬಿ.ಎಸ್.ಪಾಟೀಲ ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ, ಸಂಗಪ್ಪ ಉಪ್ಪಿನ, ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಗ್ರಾ.ಪಂ ಅಧ್ಯಕ್ಷ ಮುತ್ತಪ್ಪ ಚಿಕ್ಕಬೇವನೂರ, ಗಿರೀಶ ಪಾಟೀಲ, ಅಶೋಕ.ಮ.ಬಿರಾದಾರ, ಜೈನುದ್ದೀನ ಬಿರಾದಾರ, ಕಾಸಿನಾಥ ತೆಲಸಂಗ, ಅಣ್ಣಪ್ಪ ಬಮ್ಮನಹಳ್ಳಿ, ಮುತ್ತು ಪಾಟೀಲ, ವಿಜಯಕುಮಾರ ಬಿರಾದಾರ, ಸೋಮು ಪಾತಾಳಿ ಮತ್ತಿತರಿದ್ದರು.