ತಾಯಿ ತಂದೆ ಗುರುವಿನಲ್ಲಿ ನಂಬಿಕೆಯಿರಲಿ : ಶ್ರೀ ರಂಭಾಪುರಿ ಜಗದ್ಗುರುಗಳು

ಜಗಳೂರು ಎ.17; ಮನುಷ್ಯ ಜೀವನದಲ್ಲಿ ಜನ್ಮ ಕೊಟ್ಟ ತಾಯಿ ತಂದೆ ಮತ್ತು ಜ್ಞಾನ ನೀಡಿದ ಶ್ರೀ ಗುರುವನ್ನು ಎಂದಿಗೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು ಅವರು  ತಾಲೂಕಿನ ಬಿದರಕೆರೆ ಗ್ರಾಮದ ಶ್ರೀ ಗುರುಸಿದ್ಧೇಶ್ವರ ಬೃಹನ್ಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಲಿಂ.ಶ್ರೀ ಗಂಗಾಧರ ಶಾಸ್ತಿçಗಳ ಪುಣ್ಯ ಸ್ಮರಣೆ ಹಾಗೂ ಮಾತೋಶ್ರೀ ಪಾರ್ವತಮ್ಮನವರ ಜನ್ಮ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಕಾಯ ಮತ್ತು ಕಾಲದ ಹಿರಿಮೆಯನ್ನು ಅರಿತು ಬಾಳಿದರೆ ಜೀವನ ಉಜ್ವಲವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರಪಂಚದಲ್ಲಿ ಬೆಲೆ ಕಟ್ಟಲಾಗದ ವಸ್ತು ಅಂದ್ರೆ ಅದು ನಂಬಿಕೆ. ಅದನ್ನು ಸಂಪಾದಿಸಲು ವರುಷಗಳು ಬೇಕು. ಆದರೆ ಕಳೆದುಕೊಳ್ಳಲು ಕ್ಷಣ ಮಾತ್ರ ಸಾಕು. ಜೀವನದಲ್ಲಿ ಏನೇ ಕಳೆದುಕೊಂಡರೂ ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ಆತ್ಮ ವಿಶ್ವಾಸವೊಂದಿದ್ದರೆ ಕಳೆದುಕೊಂಡಿದ್ದೆನ್ನೆಲ್ಲಾ ಮರಳಿ ಪಡೆಯಬಹುದು. ಲಿಂ. ಉಜ್ಜಯಿನಿ ಜಗದ್ಗುರು ಗುರುಸಿದ್ಧೇಶ್ವರರು ತಪಸ್ಸು ಮಾಡಿದ ಬಿದರೆಕೆರೆ ಬೆಟ್ಟದ ಪರಿಸರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುವಂತಾಗಬೇಕು. ವೀರಶೈವ ಧರ್ಮದಲ್ಲಿ ಜಗದ್ಗುರು ರೇಣುಕಾಚಾರ್ಯರು ತತ್ವತ್ರಯಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ಜಗದ ಕತ್ತಲೆ ಕಳೆಯಲು ಸೂರ್ಯ ಅಜ್ಞಾನ ಕಳೆಯಲು ಗುರುವಿನ ಮಾರ್ಗದರ್ಶನದ ಅವಶ್ಯಕತೆಯಿದೆ. ಲಿಂ.ಗAಗಾಧರ ಶಾಸ್ತಿçಗಳು ಬದುಕಿನುದ್ದಕ್ಕೂ ವೀರಶೈವ ಸಂಸ್ಕೃತಿ ಮತ್ತು ಗುರು ಪರಂಪರೆ ಬೆಳೆಯಲು ಶ್ರಮಪಟ್ಟಿದ್ದನ್ನು ಮರೆಯಲಾಗದು. ಮಾತೋಶ್ರೀ ಪಾರ್ವತಮ್ಮನವರಿಗೆ 103 ವರುಷವಾಗಿದ್ದರೂ ಅವರ ದೈನಂದಿನ ಚಟುವಟಿಕೆ ಮತ್ತು ಸಾತ್ವಿಕ ಜೀವನ ಸಕಲರಿಗೂ ಮಾದರಿಯಾಗಿದೆ ಎಂದು ಹರುಷಪಟ್ಟು ಶ್ರೀಪೀಠದಿಂದ ರೇಶ್ಮೆ ಸೀರೆ ಫಲ ತಾಂಬೂಲ ಸ್ಮರಣಿಕೆಯಿತ್ತು ಶುಭ ಹಾರೈಸಿದರು