ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಕರಂದ್ಲಾಜೆ

ಮೈಸೂರು,ಜು.20:- ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇಂದು ತಾಯಿ ಚಾಮುಂಡೇಶ್ವರಿಗೆ ವರ್ಧಂತಿ ಮಹೋತ್ಸವ ಹಿನ್ನಲೆಯಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಇಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.
ಪ್ರತಿವರ್ಷವೂ ಆಷಾಢ ಶುಕ್ರವಾರದಂದು ಶೋಭಾ ಕರಂದ್ಲಾಜೆ ಅವರು ಮೆಟ್ಟಿಲುಗಳ ಮೂಲಕ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು, ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಸರ್ಕಾರಿ ಬಸ್ಸಿನಲ್ಲಿಯೇ ತೆರಳಿ ದರ್ಶನ ಪಡೆದಿದ್ದಾರೆ.
ದರ್ಶನ ಪಡೆದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಸಂಬಂಧ, ಪ್ರಧಾನಿ ಮೋದಿ ಜನರ ಭಾವನೆಗೆ ಸ್ಪಂದಿಸುತ್ತಾರೆ. ದಿನಬಳಕೆ ವಸ್ತುಗಳ ಮೇಲಿನ ಜಿಎಸ್ ಟಿ ಕಡಿಮೆ ಮಾಡಬಹುದು ಎಂದು ಸಚಿವರು ತಿಳಿಸಿದ್ದಾರೆ.
ಇಂದು ಜಿಎಸ್ ಟಿ ಸಂಬಂಧ ಸಭೆ ನಡೆಯಲಿದೆ. ದಿನಬಳಕೆ ವಸ್ತುಗಳ ಮೇಲಿನ ಜಿಎಸ್ ಟಿ ಕಡಿಮೆ ಮಾಡಬಹುದು. ನಮ್ಮ ಪ್ರಧಾನಿ ತಾಯಿ ಹೃದಯದವರು. ಅವರಿಗೆ ಜನರ ಭಾವನೆ ಅರ್ಥವಾಗುತ್ತೆ ಎಂದರು.
ರಾಜ್ಯದ ಬೆಳೆ ನಷ್ಟದ ವರದಿ ಇನ್ನೂ ಕೇಂದ್ರದ ಕೈ ಸೇರಿಲ್ಲ. ನೆರೆ ಸಂಪೂರ್ಣ ತಗ್ಗಿದ ಮೇಲೆ ನಷ್ಟದ ಬಗ್ಗೆ ಗೊತ್ತಾಗುತ್ತೆ ಪ್ರವಾಹ ತಗ್ಗುವವರೆಗೂ ಹಾನಿ ಬಗ್ಗೆ ತಿಳಿಯಲ್ಲ. ರಸ್ತೆ ಸೇತುವೆ ಹಾನಿ ಬಗ್ಗೆ ಮಾತ್ರ ವರದಿ ತಯಾರಾಗುತ್ತಿದೆ ಪ್ರವಾಹದಿಂದ ನನ್ನ ಜಿಲ್ಲೆಯಲ್ಲೂ ಸಹ ಸಾಕಷ್ಟು ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.
ಅವರಿಗೆ ಶಾಸಕ ಎಲ್.ನಾಗೇಂದ್ರ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಮತ್ತಿತರ ಬಿಜೆಪಿ ಮುಖಂಡರು ಸಾಥ್ ನೀಡಿದರು.