ತಾಯಿ ಎದೆ ಹಾಲು ಶಿಶುವಿಗೆ ಅಮೃತಕ್ಕೆ ಸಮಾನ

ರಾಯಚೂರು,ಆ.೦೨- ಪೋಷಕಾಂಶಗಳಿಂದ ಕೂಡಿದ ತಾಯಿ ಎದೆ ಹಾಲು ಶಿಶುವಿಗೆ ಅಮೃತಕ್ಕೆ ಹಾಗೂ ಒಂದು ಲಸಿಕೆಗೆ ಸಮಾನ ಇದು ರೋಗ ನಿರೋಧಕ ಶಕ್ತಿಯನ್ನು ಮಗುವಿಗೆ ನೀಡುತ್ತದೆ ಎಂದು ಜಿ ಅರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮೀ ಮುಂಡಾಸ್ ಅವರು ಸದರಿ ಕಾರ್ಯಕ್ರಮ ಉದ್ಘಾಟಸಿ ಎದೆಹಾಲಿನ ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ತಾಯಂದಿರಿಗೆ ವಿವರವಾಗಿ ತಿಳಿಸಿದರು.
ತಾಲೂಕಿನ ಹೊಸ ಗೋನವಾರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ರಾಯಚೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗ ಆಯೋಜಿಸಿದ್ದ ಸಮಾಜ ಕಾರ್ಯ ಶಿಬಿರದ ಅಂಗವಾಗಿ ಆರೋಗ್ಯ ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ’ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ’ ಹಾಗೂ ’ವಿಶ್ವ ಸ್ತನ್ಯ ಪಾನ ಸಪ್ತಾಹ ೨೦೨೨’ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯPತೆ ವಹಿಸಿದ ಡಾ.ಶರಣಬಸವರಾಜ ಅವರು ಸ್ತನ್ಯಪಾನದತ್ತ ಒಂದು ಹೆಜ್ಜೆ ಮುಂದೆ; ಸುಶಿಕ್ಷಿತರನ್ನಾಗಿಸಿ ಮತ್ತು ಬೆಂಬಲಿಸಿ’ ಎಂಬುದು ಈ ವರ್ಷದ ವಿಶ್ವ ಸ್ತನ್ಯಪಾನ ಸಪ್ತಾಹ ೨೦೨೨ ರ ವಿಷಯವಾಗಿದೆ. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕರಾದ ಸಂತೋಷ, ಅವರು ವೈಯಕ್ತಿಕ ಸ್ವಚ್ಚತಾ ಬಗ್ಗೆ ಹಾಗೂ ಕೈ ತೊಳೆಯುವ ವಿಧಾನಗಳ ಬಗ್ಗೆ ವಿವರವಾಗಿ ತಿಳಿಸಿದರು, ಬಜಾರಪ್ಪ ಅವರು ಕಾರ್ಯಕ್ರಮದ ಉzಶಗಳು ಮತ್ತು ಮಹತ್ವ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿPಣ ಅಧಿಕಾರಿ ಹಾಗೂ ಯುನಿಸೆಫ್ ಮತ್ತು ಆರೋಗ್ಯ ನಿರ್ವಹಣೆ ಸಂಶೋಧನ ಸಂಸ್ಥೆ ಬೆಂಗಳೂರು, ಜಿ ಸಂಯೋಜಕರಾದ ಸರೋಜ.ಕೆ ಮತ್ತು ಡಾ.ರಶ್ಮೀ ರಾಣಿ ಅಗ್ನಿಹೊತ್ರಿ, ಶಾಲೆ ಶಿPಕರು, ಉಪನ್ಯಾಸಕರು, ರಾಯಚೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಪ್ರಥಮ ವರ್ಷದ ವಿದ್ಯಾರ್ಥಿಗಳು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ತಾಯಂದಿರು ಉಪಸ್ಥಿತರಿದ್ದರು. ರಾಜೇಶ್ವರಿ ಸ್ವಾಗತಿಸಿದರು, ಅನಿಲ್ ನಿರೂಪಿಸಿದರು, ಮಹೇಶ್ ವಂದಿಸಿದರು.