ತಾಯಿ ಎದೆ ಹಾಲು ಅಮೃತ ಸಮಾನ

ಬೀದರ್: ಆ.2:ತಾಯಿ ಎದೆ ಹಾಲು ಅಮೃತ ಸಮಾನ. ಮಕ್ಕಳಿಗೆ ಆರು ತಿಂಗಳ ವರೆಗೆ ಎದೆ ಹಾಲನ್ನೇ ಕುಡಿಸಬೇಕು ಎಂದು ಡಾ. ಶರಣ ಬುಳ್ಳಾ ಹೇಳಿದರು.

ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಮಂಗಳವಾರ ನಡೆದ ಸ್ತನ್ಯಪಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎದೆ ಹಾಲಿನಲ್ಲಿ ನವಜಾತ ಶಿಶುವಿನ ಆರೋಗ್ಯಪೂರ್ಣ ಬೆಳವಣಿಗೆಗೆ ಅಗತ್ಯ ಇರುವ ಎಲ್ಲ ಪೋಷಕಾಂಶಗಳು ಇರುತ್ತವೆ ಎಂದು ತಿಳಿಸಿದರು.

ಕ್ಲಬ್ ಅಧ್ಯಕ್ಷ ಡಾ. ಕಪಿಲ್ ಪಾಟೀಲ ಮಾತನಾಡಿ, ಎದೆ ಹಾಲು ಕುಡಿಸುವುದು ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು ಎಂದು ತಿಳಿಸಿದರು.

ಎದೆ ಹಾಲಿನ ಮಹತ್ವ ಕುರಿತು ಆಶಾ ಕಾರ್ಯಕರ್ತೆಯರು ಹಾಗೂ ತಾಯಂದಿರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕ್ಲಬ್ ಕಾರ್ಯದರ್ಶಿ ಶಿವಕುಮಾರ ಪಾಖಾಲ್, ಸದಸ್ಯರಾದ ಸೂರ್ಯಕಾಂತ ರಾಮಶೆಟ್ಟಿ, ಮಹಮ್ಮದ್ ಫರ್ದಿನ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.