ತಾಯಿ ಎದೆ ಹಾಲಿನಲ್ಲಿ ರೋಗನಿರೋಧಕ ಶಕ್ತಿಯಿದೆ:ಡಾ.ಪವಾರ

ಭಾಲ್ಕಿ:ಆ.5: ತಾಯಿ ಎದೆ ಹಾಲಿನಲ್ಲಿ ಸರ್ವ ರೋಗನಿರೋಧಕ ಶಕ್ತಿಯಿದೆ.ಕಾರಣ ತಾಯಂದಿರು ಹೆತ್ತ ಮಕ್ಕಳಿಗೆ ಸಾಕಾಗುವಷ್ಟು ಪ್ರತಿನಿತ್ಯ ಎದೆಹಾಲು ಕುಡಿಸಬೇಕು ಎಂದು ಮಕ್ಕಳತಜ್ಞೆ ಡಾ.ವಸಂತ ಪವಾರ ಸಲಹೆ ನೀಡಿದರು.
ಭಾಲ್ಕಿ ಪಟ್ಟಣದ ಲೆಕ್ಚರರ್ ಕಾಲೋನಿಯ ರಸ್ತೆಗೆ ಹೊಂದಿಕೊಂಡಿರುವ ತಳವಾಡೆ ಆಸ್ಪತ್ರೆಯಲ್ಲಿ ತಾಲೂಕು ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ (ಆರ್‍ಐ 3160)ವತಿಯಿಂದ ಆಯೋಜಿಸಿದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಾಲಮಕ್ಕಳಿಗೆ ಹೆಚ್ಚು ಹೆಚ್ಚು ಹಾಲು ಕುಡಿಸಿದಂತೆ ತಾಯಂದಿರಲ್ಲಿ ಹಾಲಿನ ಉತ್ಪನ್ನ ಹೆಚ್ಚಾಗುತ್ತದೆ. ಎರಡು ಸ್ತನ್ಯಗಳಿಂದ ಮಕ್ಕಳಿಗೆ ಹಾಲು ಕುಡಿಸಬೇಕು.ಭವಿಷ್ಯದಲ್ಲಿ ಬರುವ ಮಾರಕ ಕಾಯಿಲೆಗಳನ್ನು ನಿಯಂತ್ರಿಸುವ ಶಕ್ತಿ ಹಾಲಿನಲ್ಲಿರುವುದರಿಂದ ಮಗು ಹುಟ್ಟಿದ 6 ತಿಂಗಳ ವರೆಗೆ ತಾಯಿ ಹಾಲೇ ಕುಡಿಸಬೇಕು.ಆರೋಗ್ಯದ ದೃಷ್ಟಿಯಿಂದ 2 ಗಂಟೆಗೊಮ್ಮೆ ಮಗುವಿಗೆ ಮೊಲೆ ಹಾಲುಣಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ತ್ರೀರೋಗ ತಜ್ಞೆ ಡಾ.ಶೈಲಜಾ ತಳವಾಡೆ,ಮಕ್ಕಳಿಗೆ ಹಾಲು ಕುಡಿಸುವ ಜವಾಬ್ದಾರಿ ತಾಯಿಗಷ್ಟೇ ಅಲ್ಲದೆ ಕುಟುಂಬದ ಸರ್ವ ಸದಸ್ಯರ ಮತ್ತು ವೈದ್ಯರ ಮೇಲಿದೆ.ತಾಯಿ 7-8 ತಿಂಗಳ ಗರ್ಭಾವಸ್ಥೆಯಲ್ಲಿದ್ದಾಗ ಆಸ್ಪತ್ರೆ ಸಬ್ಬಂದಿ ತಾಯಿಯ ಎದೆ ಹಾಲು ಪರೀಕ್ಷಿಸಿ ಸಲಹೆ ನೀಡಬೇಕು.ಕೆಲವು ಮಹಿಳೆಯರು ತಮ್ಮ ಸೌಂದರ್ಯ ಕೆಡುತ್ತದೆ ಎಂದು ಹಾಲು ಕುಡಿಸಲು ಹಿಂದೇಟು ಹಾಕುತ್ತಿರುವುದು ವಿಷಾದದ ಸಂಗತಿ.ಹುಟ್ಟಿದ ಕೂಸು ಕೆಲವು ಕಾಯಿಲೆಗಳ ಕಾರಣಾಂತರಗಳಿಂದ ತಾಯಿ ಬಿಟ್ಟು ಬೇರೆಡೆಯಿದ್ದಾಗ ತಾಯಿ ತನ್ನ ಮೊಲೆ ಹಾಲು ಸಂಗ್ರಹಿಸಿ ಬೇರೆಡೆ ಇದ್ದ ಮಗುವಿಗೆ ಹಾಲು ಕುಡಿಸಬಹುದು ಎಂದು ತಿಳಿಸಿದರು.ತಾಯಿ ಹಾಲಿನಲ್ಲಿ ಫೌಷ್ಠಿಕಾಂಶಯಿರುವುದರಿಮದ ಅಮೃತಕ್ಕೆ ಸಮಾನವಾಗಿರುತ್ತದೆ ಎಂದು ಹೇಳಿದರು.
ಡಾ.ನಿತೀನ ಪಾಟೀಲ್,ಡಾ.ಸಜ್ಜಲ ಬಳತೆ,ಡಾ.ಶಿಲ್ಪಾ, ಸುನೀಲಕುಮಾರ ತಳವಾಡೆ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ತಾಲೂಕು ರೋಟರಿ ಕಾರ್ಯದರ್ಶಿ ನ್ಯಾಯವಾದಿ ಸಾಗರ ನಾಯಕ್ ಸ್ವಾಗತಿಸಿದರು.ಪ್ರಾಚಾರ್ಯ ಅಶೋಕ ರಾಜೋಳೆ ನಿರೂಪಿಸಿದರು.ರೋಟರಿ ಕೋಶಾಧ್ಯಕ್ಷ ಡಾ.ಶಶಿಕಾಂತ ಭೂರೆ ವಂದಿಸಿದರು.