ತಾಯಿಯ ಹಾಲು ಶಿಶುಗಳಿಗೆ ಅಮೃತವಿದ್ದಂತೆ.

ಕವಿತಾಳ ಅಗಸ್ಟ್ ೦೩: ಕವಿತಾಳ ಸಮೀಪದ ಸಿರಿವಾರ ತಾಲ್ಲೂಕಿನ ಗೊಲ್ಲದಿನ್ನಿ ಗ್ರಾಮದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ದಿನಾಚರಣೆ ನೆಡೆಯಿತು. ಕಾರ್ಯಕ್ರಮ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಮಾತನಾಡಿದರು ಸ್ತನ್ಯಪಾನ ಮಕ್ಕಳ ಆರೋಗ್ಯಕ್ಕೆ ಬಹಳ ಮಹತ್ವದ ಮಕ್ಕಳ ದೈಹಿಕ ಬೆಳವಣಿಗೆ ತಾಯಿಯ ಏದೆಹಾಲಿನಲ್ಲಿ ಇರುವ ಕೊಲಸ್ಟ್ರಾಂ ಅಂಶ ಮಹತ್ವದ ದುಡಿಯುವ ವರ್ಗದ ಮಹಿಳೆಯರು ಮಗುವಿನ ಏದೆಹಾಲಿನ ಬಗ್ಗೆ ಅರಿತು ಕೊಳ್ಳಬೇಕು ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಎದೆ ಹಾಲು ಉಣ್ಣಿಸಬೇಕು ತಾಯಿ ಏದೆ ಕೊಡುವದರಿಂದ ಕ್ಯಾನ್ಸರ್ ಕಾಯಿಲೆಯಿಂದ ದೂರ ಇರಬಹುದು ಆರು ತಿಂಗಳು ವರಗೆ ತಪ್ಪದೇ ಏದೆ ಕೊಡಬೇಕು ನಂತರದಲ್ಲಿ ಮಗುವಿನ ಆರೋಗ್ಯದ ಬೆಳವಣಿಗೆಗೆ. ದ್ರವ ರೂಪದ ಲಘುವಾದ ಪೌಷ್ಟಿಕ ಆಹಾರ ಕೋಡಬೇಕು ಎಂದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು ಮರಿಯಪ್ಪ. ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿಗಳು ಶಿವಲಿಂಗಮ್ಮ ಅಂಗನವಾಡಿ ಕಾರ್ಯಕರ್ತೆ ಶಕುಂತಲಾ ಹಾಗೂ ಅಶಾ ಕಾರ್ಯಕರ್ತೆ ಶ್ರೀಲತಾ ಮತ್ತು ತಾಯಿಂದಿರು ಹಾಜರಿದ್ದರು.