ತಾಯಿಯ ಹತ್ತಿರ ನೂರು ಜನ ಶಿಕ್ಷಕರ ಗುಣ ಇರುತ್ತದೆ

ಮುದಗಲ್,ಮಾ.೦೬- ತಾಯಿಯ ಹತ್ತಿರ ನೂರು ಜನ ಶಿಕ್ಷಕರ ಗುಣ ಇರುತ್ತದೆ ಎಂದು ಜಿಲ್ಲಾ ಖಾಸಗಿ ಶಿಕ್ಷಣ ಒಕ್ಕೂಟದ ಸಹ ಕಾರ್ಯದರ್ಶಿ ನರಸಪ್ಪ ಯಾದವ ಹೇಳಿದರು.
ಮುದಗಲ್ ವೀರೇಂದ್ರ ಚಂದ್ರಶೇಖರ ಪಾಟೀಲ ಯರದಿಹಾಳ ಸ್ಮಾರಕ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜರುಗಿದ ೧೨ ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಗುವಿಗೆ ತಾಯಿ ಮೊದಲ ಗುರು ಎನ್ನುವಂತೆ, ಅವಳು ಮಗುವಿಗೆ ಶಿಕ್ಷಣ ನೀಡುತ್ತಾಳೆ. ಅವಳು ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು.
ಮೊಬೈಲ್ ಅಂತಹಾ ಆಧುನಿಕ ಪರಿಕರಗಳಿಂದ ದೂರ ಇಡಬೇಕೆಂದರು. ಡಾ. ಅಭಿನವ ಚನ್ನಬಸವ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಗೌಡರು, ಉದಯ ಕುಮಾರ ಕಂಬಾರ ಮಾತನಾಡಿದರು.
ಈ ಸಂದರ್ಭದಲ್ಲಿ ರಾಮಚಂದ್ರ, ಚಂದ್ರಶೇಖರ ಪಾಟೀಲ ಯರದಿಹಾಳ, ಸಂತೋಷ ಸುರಪುರ, ಕೃಷ್ಣ ಮುಳ್ಳೂರು, ಶ್ರೀಧರ ಜೀಡಿ ಇದ್ದರು.