ತಾಯಿಯ ವಿವಾಹ ವಾರ್ಷಿಕೋತ್ಸವ ನಟಿ ಐಶ್ವರ್ಯ ರೈ ಶುಭಾಶಯ

ಮುಂಬೈ, ಡಿ. ೨೩- ತಂದೆ – ತಾಯಿಯ ೫೧ನೇ ವಿವಾಹ ವಾರ್ಷಿಕೋತ್ಸವಕ್ಕೆ ಬಾಲಿವುಡ್ ನಟಿ ಐಶ್ವಂii ರೈ ಬಚ್ಚನ್ ಶುಭ ಹಾರೈಸಿದ್ದಾರೆ.
ತಾಯಿ ವೃಂದಾ ರೈ ಮತ್ತು ತಂದೆ ದಿವಂಗತ ಕೃಷ್ಣರಾಜ್ ರೈ ಅವರ ವಾರ್ಷಿಕೋತ್ಸವಕ್ಕೆ ಪುತ್ರಿ ಆರಾಧ್ಯ ಬಚ್ಚನ್ ಅವರೊಂದಿಗೆ ಶುಭಹಾರೈಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಐಶ್ವರ್ಯ ರೈ ಅವರು, ಮಮ್ಮಿ ಮತ್ತು ದೊಡ್ಡ (ಡ್ಯಾಡಿ) ಹಾಗೂ ಅಜ್ಜ ಐ ಲವ್ ಯೂ ಎಂದು ಬರೆದುಕೊಂಡಿದ್ದಾರೆ. ತಂದೆಯ ಫೋಟೋ ಮುಂದೆ ತಾಯಿ ವೃಂದಾ ರೈ, ಪುತ್ರಿ ಆರಾಧ್ಯ ಹಾಗೂ ಐಶ್ವರ್ಯ ರೈ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
೨೦೧೭ ರಲ್ಲಿ ತಂದೆ ಕೃಷ್ಣರಾಜ್ ರೈ ಅವರು ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾಯಿ ವೃಂದಾ ರೈ ಅವರಿಗೆ ವಿವಾಹ ವಾರ್ಷಿಕೋತ್ಸವದ ಶುಭ ಕೋರಿದ್ದಾರೆ.
ಕುಟುಂಬದಲ್ಲಿ ನಡೆಯಲಿರುವ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಸೇರಿದಂತೆ, ಯಾವುದೇ ಕಾರ್ಯಕ್ರಮಗಳನ್ನು ಐಶ್ವರ್ಯ ರೈ ಅವರು ಮಿಸ್ ಮಾಡಿಕೊಳ್ಳುವುದಿಲ್ಲ. ಅದೇ ರೀತಿ ತಂದೆ – ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೂ ಶುಭಕೋರಿದ್ದಾರೆ.