ತಾಯಿಯ ಮೃತದೇಹ ಬೈಕ್‌ನಲ್ಲೇ ೮೦ ಕಿ.ಮೀ. ಹೊತ್ತೊಯ್ದ ಮಗ

ಭೋಪಾಲ್, ಆ ೧- ಆಂಬುಲೆನ್ಸ್ ಸಿಗದೇ ಮಗನೊಬ್ಬ ೮೦ ಕಿಮೀ ದೂರ ತಾಯಿಯ ಮೃತದೇಹವನ್ನು ಬೈಕ್ ನಲ್ಲಿಯೇ ಹೊತ್ತೊಯ್ದ ಘಟನೆಯೊಂದು ಮಧ್ಯಪ್ರದೇಶದ ಶಾಹದೋಲ್‌ನಲ್ಲಿ ನಡೆದಿದೆ.
ಮೃತ ತಾಯಿಯ ಶವವನ್ನು ಮನೆಗೆ ಸಾಗಿಸಲು ಆಸ್ಪತ್ರೆ ಸಿಬ್ಬಂದಿಗಳು ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡದ ಕಾರಣ ೮೦ ಕಿಮೀ ದೂರ ಬೈಕ್‌ನಲ್ಲೇ ಕ್ರಮಿಸಿ ಮೃತದೇಹವನ್ನು ಕೊಂಡೊಯ್ದಿದಿದ್ದಾರೆ.
ಅನುಪ್ಪೂರಿನ ಗೋಡಾರು ಗ್ರಾಮದ ನಿವಾಸಿ ಜೈಮಂತ್ರಿ ಯಾದವ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾಳೆ.
ಮಗ ಸುಂದರ್ ಯಾದವ್ ರೋಗಿಯ ಮಗ ಸುಂದರ್ ಯಾದವ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡುವಂತೆ ಕೇಳಿಕೊಂಡಿದ್ದಾರೆ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಮಂಡಳಿ ವಿಷಯವನ್ನು ನಿರಾಕರಿಸಿದೆ. ಹೀಗಾಗಿ, ಖಾಸಗಿ ವಾಹನದ ವ್ಯವಸ್ಥೆಗೆ ಮುಂದಾದ ಯಾದವ್‌ನನ್ನು ೫,೦೦೦ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಷ್ಟೊಂದು ಹಣ ಇಲ್ಲದ ಸುಂದರ್, ೧೦೦ ರೂ.ಗೆ ಮರದ ಚಪ್ಪಡಿ ಖರೀದಿಸಿ, ಅದಕ್ಕೆ ತಾಯಿಯ ಶವವನ್ನು ಕಟ್ಟಿಕೊಂಡು ೮೦ ಕಿ.ಮೀ ದೂರದ ಅನುಪ್ಪುರ್ ಜಿಲ್ಲೆಯ ಗುಡಾರು ಗ್ರಾಮಕ್ಕೆ ತೆರಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಷಾದ ವ್ಯಕ್ತಪಡಿಸಿದ್ದಾರೆ.