
ಬೀದರ್:ಮೇ.17: ಬಸವನಗರ ಕಾಲೋನಿಯಲ್ಲಿ ಅಖಿಲ ಭಾರತ ವಿಶ್ವ ವಿದ್ಯಾಲಯ ಗಳ ಒಕ್ಕೂಟದಿಂದ “ವಿಶ್ವ ತಾಯಂದಿರ ದಿನ ” ವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನಿವೃತ್ತ ಶಿಕ್ಷಕಿ ಶ್ರೀ ಮತಿ ಶಾಂತಾಬಾಯಿ ರಾಸೂರ್ ರವರು ಮಾತ ನಾಡಿ, ವಿಶ್ವದಲ್ಲಿ ಈ ಹಿಂದೆ ಆಗಿಹೋದ ಮಹಾನ್ ವ್ಯಕ್ತಿಗಳಿಗೆ ಬೆನ್ನೆಲುಬಾಗಿ ನಿಂತಿದ್ದವರು ಅವರುಗಳ ತಾಯಿಯೇ ಆಗಿದ್ದರು. ಛತ್ರಪತಿ ಶಿವಾಜಿ, ಭಗತ್ ಸಿಂಗ್, ರಾಜಗುರು, ಸುಖ ದೇವ ನವರಂತಹ ಶೂರ- ವೀರರ ಯಶಸ್ವಿಗೆ ಅವರ ತಾಯಂದಿರ ಕೊಡುಗೆಯೇ ಮುಖ್ಯವಾಗಿದೆ. ಆದ್ದರಿಂದ ತಾಯಿಯನ್ನು ಕೇವಲ ವರ್ಷಕ್ಕೊಮ್ಮೆಯಲ್ಲ, ದಿನದ 24 ತಾಸುಗಳು ಸ್ಮರಿಸುತ್ತಿರಬೇಕೆಂದು ಅಭಿಪ್ರಾಯ ಪಟ್ಟರು.
ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯ ರಾದ ವೀರಭದ್ರಪ್ಪ ಉಪ್ಪಿನ ರವರು ಮಾತನಾಡಿ, 92 ವರ್ಷ ವಯಸ್ಸಿನ ಹಿರಿಯ ಸ್ವಾತಂತ್ರ್ಯ ಹೋರಾಟ ಗಾರ್ತಿ ಸರಸ್ವತಿ ಬಾಯಿ ಯವರ ಕುಟುಂಬದ ನಾಲ್ಕು ತಲೆಮಾರಿನ ಸದಸ್ಯ ರು ಹಾಜರಾಗಿರುವ ಈ ವಿಶ್ವ ತಾಯಂದಿರ ದಿನವು ಅವಿಭಕ್ತ ಕುಟುಂಬಗಳು ಹೆಚ್ಚಾಗಿ ಬೆಳೆಯಲಿ ಎನ್ನುವ ಸಂದೇಶವನ್ನು ನೀಡುತ್ತದೆ ಎಂದು ನುಡಿದರು. 5 ಜನ ತಾಯಂದಿರಿಗೆ ಮಕ್ಕಳು ಕಾಲುತೊಳೆದು ಪಾದ ಮುಟ್ಟಿ ನಮಸ್ಕರಿಸಿ, ಗೌರವಿಸಿದರು.ಮಂದಾಕಿನಿ, ರಾಜಶೇಖರ, ರೇಖಾ, ಲಕ್ಷ್ಮಿ, ರಶ್ಮಿ, ಡಾ. ರಾಹುಲ್, ಕೇದಾರ, ಸಾನವಿ, ಪ್ರಗ್ಯಾನ, ತನುಷ, ಶಿವಾಂಷ, ಸಿದ್ದು, ಮುಂತಾ ದವರು ಹಾಜರಿದ್ದರು.