ತಾಯಿಯಾದ ನಂತರ ರಾಣಿಮುಖರ್ಜಿ ಮತ್ತೆ ಸಿನಿಮಾ ದಲ್ಲಿ ಸಕ್ರಿಯ ’ಮಿಸೆಸ್ ಚಟರ್ಜೀ ವರ್ಸಸ್ ನಾರ್ವೆ’ ಫಿಲ್ಮ್

ತಾಯಿಯಾದ ನಂತರ ಇದೀಗ ರಾಣಿ ಮುಖರ್ಜಿ ಕೂಡ ಯಶಸ್ವಿ ನಟಿಯರ ಸಾಲಿನಲ್ಲಿ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.
ಅವರ ಮಗಳು ಅದೀರಾಳ ಓದು ಮತ್ತು ಪಾಲನೆಯಲ್ಲಿ ಯಾವುದೇ ಕೊರತೆಯನ್ನು ರಾಣಿ ಮುಖರ್ಜಿ ಕಾಣಿಸುವುದಿಲ್ಲ. ಇತ್ತೀಚಿನವರೆಗೆ ಉತ್ತರ ಯುರೋಪ್ ನ ಎಸ್ಟೋನಿಯಾ ದೇಶದಲ್ಲಿದ್ದರು. ಅಲ್ಲಿ ರಾಣಿ ಮುಖರ್ಜಿ ಮಿಸೆಸ್ ಚಟರ್ಜಿ ವರ್ಸಸ್ ನಾರ್ವೇ ಇದರ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು .


ಈ ಫಿಲ್ಮಿನ ಶೋಟಿಂಗ್ ಸ್ವಲ್ಪ ಚಾಲೆಂಜಿಂಗ್ ಆಗಿತ್ತು. ಕೋವಿಡ್ ನ ಕಾರಣ ಅಲ್ಲಿಯ ನಿಯಮದಂತೆ ಭಾರತದಿಂದ ೪೦ ಜನರ ಕ್ರೂ ಜೊತೆಗೆ ದೇಶದಲ್ಲಿ ಶೂಟಿಂಗಿಗೆ ಅನುಮತಿ ಸಿಕ್ಕಿತ್ತು .
ಒಂದು ಅಂದಾಜಿನ ಸೀಮಿತ ಬಜೆಟ್ ನ ಫಿಲ್ಮ್ ಗಾಗಿ ೨೦೦ — ೨೫೦ ಜನ ಕ್ರೂ ಮೆಂಬರ್ ಗಳ ಅವಶ್ಯಕತೆ ಇದೆ. ಆದರೆ ಇದರಲ್ಲಿ ಹೆಚ್ಚೆಂದರೆ ೧೫೦ ಜನರನ್ನು ಮಾತ್ರ ಪಡೆಯಲಾಗಿದೆ .


ಫಿಲಂನ ಡಿ ಓ ಪಿ ಮತ್ತು ಆ?ಯಕ್ಷನ್ ಡೈರೆಕ್ಟರ್ ಅನ್ನು ಕೂಡ ಅಲ್ಲಿಂದಲೇ ಪಡೆಯಲಾಯಿತು. ರಾಣಿ ಮುಖರ್ಜಿಯ ಜೊತೆಗೆ ಅವರ ಮಗಳು ಅದೀರಾ ಕೂಡ ಎಸ್ಟೋನಿಯಾ ತೆರಳಿದ್ದರು. ರಾಣಿ ಮುಖರ್ಜಿ ತನ್ನ ಜೊತೆ ೧೧ಜನರ ಕ್ರೂ ತಂಡದ ಜೊತೆ ಹೋಗಿದ್ದರು. ಯಾಕಂದರೆ ಅಲ್ಲಿ ೬೦ ದಿನಗಳ ಕಾಲ ಉಳ ಕೊಳ್ಳಬೇಕಿತ್ತು .ಆದರೆ ಶೂಟಿಂಗ್ ನಡೆದದ್ದು ೩೮ ದಿನಗಳು ಮಾತ್ರ. ಇಷ್ಟು ದೀರ್ಘ ದಿನ ಇರುವ ಕಾರಣ ಮಗಳು ಅದಿರಾಳನ್ನು ಜೊತೆಗೆ ಒಯ್ದಿದ್ದರು .


ಈ ಫಿಲ್ಮ್ ನ ೯೦ ಶೇಕಡಾ ಶೂಟಿಂಗ್ ಎಸ್ಟೋನಿಯಾದ ಟ್ಯಾನಿನ್ ಶಹರ ದಲ್ಲೇ ಪೂರ್ಣಗೊಂಡಿದೆ .ಇನ್ನು ಒಂದು ವಾರದ ಕೆಲಸ ಮುಂಬೈಯಲ್ಲಿ ಇದೆ.
ಎಸ್ಟೋನಿಯಾ ದಲ್ಲಿ ಇದಕ್ಕಿಂತ ಮೊದಲು ಯಾವುದೇ ಬಾಲಿವುಡ್ ನ ಫಿಲ್ಮ್ ಶೂಟಿಂಗ್ ನಡೆದಿಲ್ಲ .ಕಳೆದ ತಿಂಗಳು ರಾಣಿ ಮುಖರ್ಜಿಯ ೪೩ ನೇ ಹುಟ್ಟುಹಬ್ಬಕ್ಕೆ ಈ ಫಿಲ್ಮ್ ಘೋಷಿಸಲಾಗಿತ್ತು. ಮದುವೆಯಾಗಿ ಮಕ್ಕಳೂ ಆದನಂತರ ಈ ಹಿಂದೆ ಶ್ರೀದೇವಿ( ಇಂಗ್ಲಿಶ್ ವಿಂಗ್ಲಿಶ್,ಮಾಮ್) ಅಮೃತಾಸಿಂಗ್( ಬದ್ಲಾ) ವಿದ್ಯಾ ಬಾಲನ್(ಕಹಾನೀ) ಮೊದಲಾದ ನಟಿಯರು ಮತ್ತೆ ಖ್ಯಾತರಾದುದಿದೆ.

ಧರ್ಮೇಂದ್ರರಿಂದ ನಟ ರಣವೀರ್ ಸಿಂಗ್ ಗೆ ಶ್ಲಾಘನೆ: “ವೋ ಡಾರ್ಲಿಂಗ್ ಹೈ. ಯಾವಾಗ ಸಿಕ್ಕಿದರೂ ಅಪ್ಪಿಕೊಳ್ಳುತ್ತಾರೆ”.

ಬಾಲಿವುಡ್ ನಟ ಧರ್ಮೇಂದ್ರ ಫಿಲ್ಮ್ ’ರಾಕೀ ಔರ್ ರಾನೀ ಕೀ ಪ್ರೇಮ್ ಕಹಾನೀ’ ಯಲ್ಲಿ ರಣವೀರ್ ಸಿಂಗ್ ಅವರ ಕೆಲಸಕ್ಕೆ ಶ್ಲಾಘನೆ ಮಾಡಿದ್ದಾರೆ. ಹಾಗೂ ಆ ಫಿಲ್ಮ್ ನಲ್ಲಿನ ತನ್ನ ಕೆಲವು ಅನುಭವ ಹಂಚಿಕೊಂಡಿದ್ದಾರೆ.


ನಾಯಕ ರಣವೀರ್ ಸಿಂಗ್ ಸೆಟ್ ನಲ್ಲಿ ಯಾವಾಗ ಭೇಟಿ ಆದರೂ ಆಲಿಂಗನ ಮಾಡುತ್ತಾರೆ.ಅವರು ರಣವೀರ್ ರನ್ನು ಹೊಗಳುತ್ತಾ ವೋ ಡಾರ್ಲಿಂಗ್ ಹೈ ಎಂದು ಹೇಳಿದರು.
ಧರ್ಮೇಂದ್ರ ಬಹಳ ಸಮಯದ ನಂತರ ಸಿನಿಮಾಕ್ಕೆ ಹಿಂತಿರುಗಿದ್ದಾರೆ.ಕರಣ್ ಜೋಹರ್ ನಿರ್ದೇಶನದಲ್ಲಿನ ಈ ಫಿಲ್ಮ್ ನಲ್ಲಿ ಧರ್ಮೇಂದ್ರ ಜಯಾ ಬಚ್ಚನ್ ಮತ್ತು ಶಬನಾ ಆಜ್ಮೀ ಜೊತೆ ಕಾಣಿಸಿದ್ದಾರೆ.ಫಿಲ್ಮ್ ನ ನಾಯಕಿ ಅಲಿಯಾ ಭಟ್ಟ್.


“ರಣವೀರ್ ಸಿಕ್ಕಿದಾಗಲೆಲ್ಲ ನನ್ನ ಕೈ ಹಿಡಿಯುತ್ತಾರೆ.ಆಲಿಂಗನ ಮಾಡುತ್ತಾರೆ.ಅವರು ಬಹಳ ಪ್ರೀತಿಯುಳ್ಳ ನಟ.ಸಾಮಾನ್ಯನಂತೆ ವ್ಯವಹರಿಸುತ್ತಾರೆ.ತನ್ನ ಫರ್ಫಾರ್ಮೆನ್ಸ್ ಉತ್ತಮವಾಗಿ ಮಾಡುತ್ತಾರೆ.ಆಲಿಯಾ ಕೂಡಾ ಬಹಳ ಉತ್ತಮ ನಟಿ.”
“ಜಯಾ ಮತ್ತು ತಾನು ಸೆಟ್ ನಲ್ಲಿ ಭೇಟಿಯಾದಾಗ ನಮ್ಮ ಹಳೆ ಫಿಲ್ಮ್ ’ಗುಡ್ಡೀ’ ಯನ್ನು ನೆನಪಿಸುತ್ತಿದ್ದೆವು.ಜಯಾ ಬಹಳ ದಿನಗಳ ನಂತರ ಭೇಟಿ ಆಗಿದ್ದಾರೆ.ನಮ್ಮ ಫಿಲ್ಮ್ ಗುಡ್ಡೀ ೧೯೭೧ ರಲ್ಲಿ ಬಂದಿತ್ತು.
ರಾಕೀ ಔರ್ ರಾನೀ ಕೀ ಪ್ರೇಮ್ ಕಹಾನೀ ಐದು ವರ್ಷದ ನಂತರ ಕರಣ್ ಜೋಹರ್ ನಿರ್ದೇಶಿಸುತ್ತಿರುವ ಫಿಲ್ಮ್ ಆಗಿದೆ.