ತಾಯಿಯನ್ನ ಕೊಂದು ಮಂತ್ರಪಠಣ ಮಾಡಿದ ಮಗನ ಸೆರೆ

ಗಾಂಧಿನಗರ,ಡಿ.30- ತಾಯಿಯನ್ನು ಕೊಂದು, ಅಂಗಳದಲ್ಲಿ ಆಕೆಯ ಮೃತ ದೇಹವನ್ನಿಟ್ಟು, ಬೆಂಕಿ ಹಚ್ಚಿ, ಮಂತ್ರ ಪಠಿಸಿದ ಪಾಪಿ ಮಗನನ್ನು ಗುಜರಾತ್​ನ ಬರೋಡಾ
ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ನ ಬರೋಡಾದ ದಿವ್ಯೇಶ್​ ಸೋಮವಾರದಂದು ತಾಯಿಯ ಎದೆಗೆ ಹೊಡೆದಿದ್ದಾನೆ. ನಂತರ ಆಕೆಗೆ ಮನಸೋಇಚ್ಛೆ ಹೊಡೆದು ಕೊಲೆ ಮಾಡಿದ್ದಾನೆ.
ಆಕೆಯ ಮೃತ ದೇಹವನ್ನು ಅಂಗಳಕ್ಕೆ ಎಳೆ ತಂದಿದ್ದಾನೆ. ಅಲ್ಲಿ ದೇಹದ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಪಕ್ಕದಲ್ಲಿ ನಿಂತು ‘ಓಂ ಶಾಂತಿ ಓಂ’ ಎಂದು ಪಠಿಸಲಾರಂಭಿಸಿದ್ದಾನೆ. ಈ ಭಯಾನಕ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳೀಯರು ಕೂಡಲೇ ಆತನ ಸಹೋದರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಮನೆಗೆ ಬಂದ ಸಹೋದರಿ ದಿವ್ಯೇಶ್​ನನ್ನು ಪ್ರಶ್ನಿಸಿದ್ದಾಳೆ.
ಅಮ್ಮನನ್ನು ಏಕೆ ಕೊಂದೆ ಎಂದು ಕೇಳಿದ್ದಾಳೆ. ಅದಕ್ಕೆ ಉತ್ತರಿಸಿದ ದಿವ್ಯೇಶ್​, ಸತ್ತು ಹೋಗಿರುವ ನನ್ನ ಅಪ್ಪ ಕನಸಿನಲ್ಲಿ ಬಂದಿದ್ದರು. ಅಮ್ಮನನ್ನು ನನ್ನ ಬಳಿ ಕಳುಹಿಸಿಕೊಡು ಎಂದು ಕೇಳಿದರು. ಅದಕ್ಕೇ ಹೀಗೆ ಮಾಡಿದೆ ಎಂದು ಹೇಳಿದ್ದಾಳೆ. ದಿವ್ಯೇಶ್​ನ ನಡವಳಿಕೆ ಕಂಡು ಗಾಬರಿಗೊಂಡಿರುವ ಸಹೋದರಿ, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.