ತಾಯಿನುಡಿಯಾದ ನಮ್ಮತನ ಕಳೆದುಕೊಳ್ಳಬೇಡಿ

ಚಿತ್ರದುರ್ಗ,ಅ.25;  ಜಾಗತೀಕರಣದ ಬಂದು 20 ವರ್ಷಗಳು ಕಳೆದು ಹೋಗಿದ್ದು, ಅನೇಕ ಪಲ್ಲಟಗಳು ಸಂಭವಿಸಿವೆ. ಈ ಸಂದರ್ಭದಲ್ಲಿ ತಾಯಿ ನುಡಿಯಾದ ನಮ್ಮ ತನವನ್ನು ಕಳೆದುಕೊಳ್ಳಬಾರದು ಎಂದು ವಿಮರ್ಶಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ತಾರಿಣಿ ಶುಭದಾಯಿನಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ  ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮದಕರಿ ಯುವಕ ಸಂಘ ಹಾಗೂ ಮದಕರಿ ನಾಯಕ ಸಾಂಸ್ಕøತಿಕ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡಕ್ಕಾಗಿ ನಾವು ಅಭಿಯಾನ-ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡಕ್ಕಾಗಿ ಕನ್ನಡದ ದಾಸಯ್ಯ ಎಂಬ ಕಾವ್ಯನಾಮದೊಂದಿಗೆ ಬರೆದ ಕನ್ನಡದ ಶಾಂತಕವಿ ಅವರು ಕನ್ನಡದ ಏಕೀಕರಣದ ಸಲುವಾಗಿ ಹಾಗೂ ಕನ್ನಡ ನಾಡನ್ನು ಒಂದು ಗೂಡಿಸಲಿಕ್ಕಾಗಿ, ಕನ್ನಡ ನುಡಿಯನ್ನು ಜನರ ಮಧ್ಯೆ ಹರಡಲಿಕ್ಕಾಗಿ ಜೋಳಿಗೆ ಹಾಕಿಕೊಂಡು ಊರೂರು ಸುತ್ತಿದ್ದಾರೆ. ಇಂತಹ ಬಹುದೊಡ್ಡ ಪರಂಪರೆಯನ್ನು ಕನ್ನಡ ಹೊಂದಿದೆ ಎಂದು ಹೇಳಿದರು.ಬಿ.ಎಂ.ಶ್ರೀಕಂಠಯ್ಯ, ಜೋಳಿಗೆ ಕವಿ ಶಾಂತಕವಿ ಸೇರಿದಂತೆ ಅನೇಕ ಹಿರಿಯ ಕವಿಗಳ ಒಂದೊಂದು ಕನ್ನಡ ಮಾತನ್ನು ಮಾತನಾಡೋಣ, ಕನ್ನಡ ನಮ್ಮ ತನವಾಗಲಿ ಎಂಬ ಮಹನೀಯರು ದೀಕ್ಷೆಯನ್ನು ಕೊಟ್ಟಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಧನಂಜಯ  ಮಾತನಾಡಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಅಭಿಯಾನವನ್ನು ಜಿಲ್ಲೆಯಾದ್ಯಂತ ಅ.24ರಿಂದ ಅ.31 ರವರೆಗೆ ನಡೆಸಲಾಗುತ್ತದೆ. ಕನ್ನಡದಲ್ಲಿ ಮಾತನಾಡುವುದು, ಶುದ್ಧ ಕನ್ನಡ ಬರವಣಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ನಿರ್ದೇಶಕಿ ಗಾಯತ್ರಿ ಶಿವರಾಂ ಇದ್ದರು.