ತಾಯಿಟೋಣಿ ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಮಳೆಗೆ ತಾಲ್ಲೂಕಿನ ತಾಯಿಟೋಣಿ ವಿವಿಧ ಗ್ರಾಮಗಳಲ್ಲಿ  ಮನೆಗಳು ಸಹಿತ ಹಾನಿಯಾಗಿದ ಗ್ರಾಮಕ್ಕೆ   ತಹಶೀಲ್ದಾರ್ ಡಾ.ನಾಗವೇಣಿ ಬೇಟಿ ಪರಿಶೀಲನೆ ನಡೆಸಿದರು. ತಾಯಿಟೋಣಿ ಗ್ರಾಮಕ್ಕೆ ತಹಶೀಲ್ದಾರ್ ಡಾ.ನಾಗವೇಣಿ ಭೇಟಿ ನೀಡಿ ಕುಸಿದ ಮನೆಗಳು ಹಾಗೂ ಮೇಲ್ಚಾವಣಿ ಹಾರಿದ ಮನೆಗಳನ್ನ ಪರಿಶೀಲಿಸಿ ಈಗಾಗಲೇ ಮಳೆಯಿಂದ ನಷ್ಠವಾದ ಮನೆಗಳನ್ನು ಪಟ್ಟಿಮಾಡಿ ಸರ್ಕಾರದಿಂದ ಶೀಘ್ರವೇ  ಸಹಾಯಧನ ದೊರಕಿಸಿಕೊಡಲಾಗುವುದು ಎಂದರು ಹಾಗು ಬೆಳೆಗಳು ನಷ್ಟ ಹೊಂದಿದ್ದರೆ ಅಂತ ರೈತರ ಪಟ್ಟಿ ಮಾಡಲು ಗ್ರಾಮ‌ಲೆಕ್ಕಾದಿಕಾರಿಗೆ ಸೂಚಿಸಿದರುಇನ್ನು ಇತರೆ ಗ್ರಾಮಗಳಲ್ಲಿ ಹಿರೇಮಲ್ಲನಹೊಳೆ. ಸಾಲೇಹಳ್ಳಿ  ಚಿಕ್ಕಮಲ್ಲನ ಹೊಳೆ ವಿಧದ ಗ್ರಾಮಗಳಲ್ಲಿ ತೋಟಗಾರಿಕ ಬೆಳೆಗಳು ನಷ್ಠ ಹೊಂದಿರುವ ಬಗ್ಗೆ ಮಾಹಿತಿ ಇದ್ದು ತೋಟಗಾರಿಕ ಇಲಾಖೆ ಅದಿಕಾರಿಗಳಿಗೆ ಪರಿಶೀಲಿಸುವಂತೆ ಫೋನ್ ಮೂಲಕ ತಿಳಿಸಿದರು
ವಿದ್ಯುತ್ ದುರಸ್ಥಿ ಕಾರ್ಯವನ್ನ ತುರ್ತಾಗಿ
ಮುಗಿಸಿ ಘನತ್ಯಾಜ್ಯ ವಿಲೇವಾರಿಗೆ ಸಂಬಂದಪಟ್ಟ ಅದಿಕಾರಿಗಳಿಗೆ ತಿಳಿಸಲಾಗುವುದು ಎಂದರು ಇದೇ ವೇಳೆ ಪ್ರಗತಿಪರ ಹೋರಾಟಗಾರ ಧನ್ಯಕುಮಾರ್ ಮಾತನಾಡಿ ನಮ್ಮ ಗ್ರಾಮದಲ್ಲಿ ಸುಮಾರು ಮನೆಗಳ ಮೇಲ್ಛಾವಣೆ ಹಾಗು ಹಳೇ ಮನೆಗಳು ಕುಸಿದು ಬಿದ್ದು ಸಾಕಷ್ಟು ತೊಂದರೆಯಲ್ಲಿದ್ದಾರೆ ಸರ್ಕಾರದ ಕೇವಲ ಸಹಾಯಧನ ಅಲ್ಲೆ ನೊಂದ ಕುಟುಂಬಗಳಿಗೆ ಶೀಘ್ರವೇ ವಸತಿ ಕಲ್ಪಿಸಬೇಕು ಗ್ರಾಮಕ್ಕೆ ವಿದ್ಯುತ್ ಹಾಗು ಕುಡಿಯುವ ನೀರು ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ ಶೀಘ್ರವೇ ಸೌಲಭ್ಯ ಕಲ್ಪಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷ ಕುಬೇರನಾಯ್ಕ. ವಿಜಯಕುಮಾರ್ ಗ್ರಾಮ‌ಲೆಕ್ಕಾದಿಕಾರಿ ಸತೀಶ್ ಗ್ರಾಮದ ಮುಖಂಡರು ಅರವಿಂದ್ ಪಾಟೀಲ್  ಮಂಜಣ್ಣ ಮಹದೇವರೆಡ್ಡಿ ಕೇಶವರೆಡ್ಡಿ ಲೋಕಣ್ಣ ರಾಜಪ್ಪ. ಮೋಹನ್ ರಘು ಸೇರಿದಂತೆ ಗ್ರಾಮಸ್ಥರು ಇದ್ದರು.