ತಾಯಿಗೆ ನಿತ್ಯಅಶ್ಲೀಲ ಪದಗಳಿಂದ ಕಿರುಕುಳ, ಸಹಿಸದ ತಮ್ಮನಿಂದ ಅಣ್ಣನ ಕೊಲೆ

ಮಾನ್ವಿ.ಜ.೧೪- ನಿತ್ಯವೂ ಕುಡಿದು ಬಂದು ಹೆತ್ತ ತಾಯಿಯನ್ನು, ಸಹೋದರಿಯನ್ನು,ಸೇರಿದಂತೆ ಸುತ್ತಮುತ್ತಲಿನ ಕುಟುಂಬದವರಿಗೆ ಅಶ್ಲೀಲ ಪದಗಳಿಂದ ಕಿರುಕುಳ ನಿಂದನೆ ಮಾಡುತ್ತಿದ್ದ ಸ್ವತಃ ಅಣ್ಣನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ಮಾನವಿ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಇವರು ಭೇಟಿ ನೀಡಿ ಪರಿಶೀಲನೆ ಮಾಡಿ ಮಾನ್ವಿ ಠಾಣೆ ಪಿ ಎಸ್ ಐ ವೆಂಕಟೇಶ, ಪಿ ಐ ಮಹಾದೇವಪ್ಪ ಪಂಚಮುಖಿ ಇವರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ..
ಪಟ್ಟಣದ ಸೋನಿಯಾ ಗಾಂಧಿ ಸ್ಲಂ ನಿವಾಸಿಗಳು ಕೂಲಿ ಕಾರ್ಮಿಕರಾದ್ದ ಇವರ ಕುಟುಂಬದಲ್ಲಿ ತಂದೆ,ತಾಯಿ ಸಹೋದರಿ,ಅಣ್ಣ,ತಮ್ಮ ಸೇರಿದಂತೆ ಒಟ್ಟು ಐದು ಜನರು ವಾಸವಾಗಿದ್ದರು ಕುಟುಂಬಕ್ಕೆ ದೊಡ್ಡ ಮಗನಾಗಿದ್ದ, ಕೊಲೆಯಾದ ವ್ಯಕ್ತಿ ಪರಿಷತ್ ರಾಜ (೨೬) ದಿನನಿತ್ಯವು ಮದ್ಯಪಾನದ ಮತ್ತಿನಲ್ಲಿ ಮನೆಗೆ ಆಗಮಿಸಿ ತಾಯಿ ಹಾಗೂ ತಂಗಿಗೆ ಅಶ್ಲೀಲ ಪದಗಳೊಂದಿಗೆ ಕಿರುಕುಳ ನಿಂದನೆ ಮಾಡುತ್ತಿದ್ದ ಇದನ್ನು ನೋಡಿ ಅಕ್ಕಪಕ್ಕದ ಮನೆಯವರು ತಿಳಿ ಹೇಳುವುದಕ್ಕೆ ಆಗಮಿಸಿದರೆ ಅವರಿಗೂ ತೀರಾ ಅವ್ಯಾಚ್ಚ ಶಬ್ದಗಳಿಂದ ಬೈಯುತ್ತಿದ್ದ ಇಂತಹ ಘಟನೆಯನ್ನು ಬಹಳ ವರ್ಷಗಳಿಂದ ನೋಡಿಕೊಂಡೆ ಇರುತ್ತಿದ್ದ ಅವನ ತಮ್ಮನಾದ ಭೀಮಾಶಂಕರ ( ೧೭) ತಾನಾಯ್ತು ತನ್ನ ಕೆಲಸವಾಯ್ತು ಎನ್ನುವ ರೀತಿಯಲ್ಲಿ ನಿತ್ಯವೂ ಕೂಲಿ ಕೆಲಸಕ್ಕೆ ತೆರಳಿ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಇಂತಹ ಸಂದರ್ಭದಲ್ಲಿ ಶುಕ್ರವಾರ ಸಂಜೆ ಮನೆಯಲ್ಲಿ ಗಲಾಟೆ ಆಗುವುದನ್ನು ಗಮನಿಸಿದ್ದಾನೆ. ಸ್ವತಃ ಅಣ್ಣ ಪರಿಷತ್ ರಾಜ್ ಕುಡಿದು ಬಂದು ತಾಯಿಯನ್ನು ತುಂಬಾ ಕೀಳು ಮಟ್ಟದ ಅಶ್ಲೀಲ ಪದಗಳಿಂದ ನಿಂದನೆ ಮಾಡುವುದನ್ನು ಗಮನಿಸಿದ ಸಹೋದರ ಭೀಮಾಶಂಕನ ಸಂಧಾರ್ಬಿಕ ಕೋಪ ನೆತ್ತಿಗೆ ಬಂದು ಮನೆಯಲ್ಲಿದ್ದ ಕೊಡಲಿಯಿಂದ ಅಣ್ಣನನ್ನು ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ, ಸುತ್ತಮುತ್ತಲಿನ ಪ್ರದೇಶದಲ್ಲಿನ ಜನರು ಹೌದು ಸತ್ತ ವ್ಯಕ್ತಿ ನಿತ್ಯವೂ ತಾಯಿಗೆ ಹಾಗೂ ತಂಗಿಗೆ ಅಶ್ಲೀಲ ಪದಗಳಿಂದ ಕಿರುಕುಳ ನೀಡುತ್ತಿದ್ದ ಅಲ್ಲದೇ ಕೆಲಸಕ್ಕೆ ಹೋಗದೆ ನಿತ್ಯವೂ ಮದ್ಯಪಾನ ಮಾಡುತ್ತಿದ್ದ ಇವರ ಕುಟುಂಬವನ್ನು ಅವನ ತಮ್ಮನಾದ ಭೀಮಾಶಂಕರ ನೋಡಿಕೊಳ್ಳುತ್ತಿದ್ದ ಇಂತಹ ಘಟನೆ ನಡೆಯಬಾರದಾಗಿತ್ತು ಎಂದು ಜನರು ಮಾತಾನಾಡಿಕೊಳ್ಳುತ್ತಿದ್ದಾರೆ.