
ಇಂಡಿ: ಫೆ.27: ವಿಜಯಪೂರ ಜಿಲ್ಲೆಯ ಶೈಕ್ಷಣಿಕ ಕ್ರಾಂತಿಗೆ ಬಂಥನಾಳದ ಶ್ರೀಸಂಗನಬಸವಶ್ರೀಗಳ ಕೊಡುಗೆ ಅನೂನ್ಯವಾಗಿದೆ . ಪರಮ ಪೂಜ್ಯರು ಜೋಳಿಗೆಯಿಂದ ಸಂಗ್ರಹಿಸಿದ ಹಣದಿಂದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಈ ಭಾಗದ ಜನರಿಗೆ ಸಂಸ್ಕಾರ ನೀಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಸಾಲೋಟಗಿ ಗ್ರಾಮದ ಶ್ರೀಶಿವಯೋಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿಜಯಪೂರ ಜಿಲ್ಲೆಯ ಇಂಡಿ ಗಡಿಭಾಗದಲ್ಲಿದ್ದರೂ ಸಹಿತ ಸಾಹಿತಿಕ ,ಸಂಸ್ಕøತಿಕ, ಧಾರ್ಮಿಕ, ಅಧ್ಯಾತ್ಮಿಕ ಕ್ಷೇತ್ರದಲ್ಲಿ ಬಡತನವಿಲ್ಲ. ಈ ಭಾಗದಲ್ಲಿ ಅನೇಕ ಸಂತ- ಮಹಾಂತರು, ಶಣರು,ದಾರ್ಶನಿಕ ಪುರಷರು ನಡೇದಾಡಿ ಈ ಜನ್ಮಭೂಮಿಯನ್ನು ಪಾವನಮಯಗೋಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಹಲಸಂಗಿ ಗೆಳೆಯರಾದ ಸಿಂಪಿಲಿಂಗಣ್ಣ,ಮಧುರಚೆನ್ನರು, ಧೂಲಸಾಹೇಬರಾಗಿದ್ದರೆ, ಸಂತ-ಮಹಾಂತರಲ್ಲಿ ಲಚ್ಯಾಣದ ಸಿದ್ದಲಿಂಗರು, ಸಾಲೋಟಗಿ ಶಿವಯೋಗೇಶ್ವರರು, ಗೋಳಸಾರದ ಶ್ರೀಪುಂಡಲಿಂಗ ಶಿವಯೋಗಿಗಳು, ಹೋರ್ತಿಯ ಶ್ರೀರೇವಣಸಿದ್ದೇಶ್ವರರು. ಇಂಡಿ ಪಟ್ಟಣದ ಶ್ರೀಶಾಂತೇಶ್ವರ ಶಿವಯೋಗಿಗಳು ಸೇರಿದಂತೆ ಅನೇಕ ಮಹಾನ್ ದಾರ್ಶನಿಕ ಪರುಷರು ಈ ಭಾಗದ ಜನರಿಗೆ ಹೃದಯವಂತರನ್ನಾಗಿಸಿದ್ದಾರೆ.
ಶ್ರೀಬಂಥನಾಳದ ಸಂಗನಬಸವ ಶಿವಯೋಗಿಗಳು ಮಕ್ಕಳನ್ನು ದೇವರಂತೆ ಕಂಡಿದರು ಶಾಲೆಯೇ ದೇವಾಲಯ ಮಕ್ಕಳೇ ದೇವರು ಎಂದಿದ್ದಾರೆ ಅವರು ನುಡಿದಂತೆ ನಡೇದು ತೋರಿಸಿದ್ದಾರೆ. ಇಂದು ತಾಲೂಕಿನಲ್ಲಿ ಅನೇಕ ಖಾಸಗಿ ,ಅನುಧಾನ ರಹಿತ ಶಿಕ್ಷಣ ಸಂಸ್ಥೆಗಳು ನಡೆಸಿಕೊಂಡು ಹೋಗುತ್ತಿರುವ ಕಾರ್ಯಶ್ಲ್ಯಾಗನೀಯ. ಅನುಧಾನ ರಹಿತ ಶಿಕ್ಷಕರ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಪರಸ್ಥಿತಿ ಹೇಳತೀರದು ಕಷ್ಟದ ಸಂದರ್ಬದಲ್ಲಿ ಸರಕಾರಗಳು ಸಹಾಯಕ್ಕೆ ಬರಬೇಕು. ಎಲ್ಲಾ ಧಾನಕ್ಕಿಂತ ಶಿಕ್ಷಣ ಧಾನ ಕೂಡಾ ಪವಿತ್ರವಾಗಿದೆ ಇಂದು ತಾಯಂದಿಯರು ನಿಮ್ಮ ಮಕ್ಕಳಿಗೆ ಒಳ್ಳೇಯ ಶಿಕ್ಷಣ ಕೂಡಿಸಲು ಪ್ರಮಾಣಿಕ ಪ್ರಯತ್ನ ಮಾಡಿ ಎಂದರು.
ವೇದಮೋರ್ತಿ ಬದ್ರಯ್ಯಾ. ಸೋಮಯ್ಯಾ ಹಿರೇಪಟ್ಟ ಸಾನಿಧ್ಯ ವಹಿಸಿದರು.
ಸಂಸ್ಥೆ ಅಧ್ಯಕ್ಷ ಜೀತಪ್ಪ ಕಲ್ಯಾಣಿ, ಮಲ್ಲನಗೌಡ ಪಾಟೀಲ, ನ್ಯಾಯವಾದಿ ಸಿದ್ದಣ್ಣಾ ಬೂೀದಿಹಾಳ , ಅಶೋಕಗೌಡ ಬಗಲಿ,ವಿಠ್ಠಲ ಗೌರ ,ರಮೇಶ ಅಡಗಲ್.ಶಿವಯೋಗೆಪ್ಪ ಜೋತಗೊಂಡ,ಎಮ್,ಎಮ್ ವಾಲಿ, ಡಿ,ಜೆ ಜೋತಗೊಂಡ, ಪಿ.ಎ ಕರೂರ, ಜಿ,ವ್ಹಿ ಚವ್ಹಾಣ, ಕೆ.ಬಿ ಹೂಸೂರ, ಆರ್.ಆರ್ ಹೂಸೂರ, ಯಮನಪ್ಪ ನಾಟೀಕಾರ, ಕಲ್ಲಪ್ಪ ಗುಡಮಿ, ಶಿವಯೋಗೇಪ್ಪ ಮಾಡ್ಯಾಳ, ಶಿವಾನಂದ ಮನಗೊಂಡ, ವಸಂತ ರಾಠೋಡ, ನೀಲಕಂಠ ರೂಗಿ. ಇಲಿಯಾ ಬೋರಾಮಣಿ, ಸಂತೋಷ ಪರಶೇನವರ್, ಸೇರಿದಂತೆ ಅನೇಕರಿದ್ದರು.
ಮುಖ್ಯ ಶಿಕ್ಷಕ ರಾಜಕುಮಾರ ಹೊಸೂರ ,ಶಿಕ್ಷಕ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸರ್ವಸದಸ್ಯರು ಇದ್ದರು.
ಮನೆಯ ಮೋದಲ ಪಾಠ ಶಾಲೆ ಜನನಿ ತಾನೇ ಮೋದಲ ಗುರು ಎನ್ನುವಂತೆ ತಾಯಂದಿಯರು ಮಕ್ಕಳಿಗೆ ಮನೆಯಿಂದಲೇ ಒಳ್ಳೇಯ ಸಂಸ್ಕಾರ ನೀಡಿ ಈ ಭಾಗದಲ್ಲಿ ಸ್ವಾಭಿಮಾನ, ನೈತಿಕತೆಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡೋಣ. ಈ ಭೂಮಿಯ ಮೇಲೆ ಎಷ್ಟು ದಿನ ಬದುಕುತ್ತೇವೆಯೋ ಗೊತ್ತಿಲ್ಲ ಬದುಕಿರುವ ದಿನಗಳಲ್ಲಿ ಇನ್ನೋಬ್ಬರಿಗೆ ಗೌರವಿಸುವ, ಪ್ರೀತಿಸುವ ಗುಣ ಬಳೆಸಿ ಈ ಭಾಗ ಇನ್ನೋಬ್ಬರು ನೋಡಿ ಕಲಿಯುವಂತಾಗಬೇಕು.
ಶಾಸಕ ಯಶವಂತರಾಯಗೌಡ ಪಾಟೀಲ.