ತಾಯಂದಿರನ್ನು ಮಕ್ಕಳು ವೃದ್ಧಾಶ್ರಮಕ್ಕೆ ಕಳುಹಿಸದಿರಲು ಮನವಿ


ಸಂಜೆವಾಣಿ ವಾರ್ತೆ
ಸಂಡೂರು: ಮೇ: 15:  ತಮ್ಮ ಜೀವನವನ್ನೇ ಒತ್ತೆಯಿಟ್ಟು ತಂದೆ-ತಾಯಿಗಳು ತಮ್ಮ ಜೀವನದ ಸುಖವನ್ನೇ ತ್ಯಾಗಮಾಡಿ ನಿಮ್ಮನ್ನು 9 ತಿಂಗಳು, 9 ದಿನ ಹೊತ್ತು ನಿಮ್ಮನ್ನು ಬೆಳೆಸಿ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಿ ನಿಮ್ಮನ್ನು ಉತ್ತುಂಗ ವ್ಯಾಸಾಂಗವನ್ನು ನೀಡಿ ನಿಮ್ಮನ್ನು ಸಲುಹಿ, ಸಾಕಿ ನಿಮ್ಮನ್ನು ದೊಡ್ಡವರನ್ನಾಗಿ ಮಾಡಿದ್ದಾರೆ. ಪ್ರತಿಯೋರ್ವ ಮಕ್ಕಳು ಸಹ ತಂದೆ ತಾಯಿಯನ್ನು ಪೋಷಕರನ್ನು ಗೌರವದಿಂದ ಕಾಣುವುದರ ಜೊತೆಗೆ ಹಿರಿಯರಾದವರು ಮಕ್ಕಳನ್ನು ಗೌರವದಿಂದ ಕಆಣುವುದು ಬಹಳ ಪ್ರಮುಖವಾದ ಅಂಶವಾಗಿದ್ದು ಪ್ರತಿಯೋರ್ವ ಮಕ್ಕಳು ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸದೇ ಅವರ ರಕ್ಷಣೆಯನ್ನು ಮಾಡಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ತಾಯಂದಿರ ದಿನಾಚರಣೆಯನ್ನು ಒಂದು ದಿನ ಮಾಡಿದರೆ ಸಾಲದು ಪ್ರತಿದಿನವೂ ತಂದೆ ತಾಯಿಗಳಿಗೆ ಗೌರವ ನೀಡಿ ಅವರನ್ನು ಪಾಲನೆ ಪೋಷಣೆ ಮಾಡಿದಲ್ಲಿ ನಿಮ್ಮ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ತಂದೆ ತಾಯಿಗಳನ್ನು ತಿರಸ್ಕರಿಸಿದಲ್ಲಿ ನಿಮ್ಮ ಜಿವನ ಸುಗಮವಾಗಿರಲು ಸಾಧ್ಯವಿಲ್ಲ ಎಂದು ತಹಶೀಲ್ದಾರ ಅನಿಲ್‍ಕುಮಾರ್ ಜಿ. ಕರೆನೀಡಿದರು.
ಅವರು ಪಟ್ಟಣದಲ್ಲಿ ತಮ್ಮ ಕಛೇರಿಯಲ್ಲಿ ತಾಯಂದಿರ ದಿನದ ಅಂಗವಾಗಿ ಪತ್ರಕರ್ತರಾದ ಸಂಜೆವಾಣಿ ವರದಿಗಾರರೊಂದಿಗೆ ಮಾತನಾಡುತ್ತಾ ಮಾತೆಯಲ್ಲಿ ದೈವಿಗುಣ ಇರಲು ಸಾಧ್ಯ. ಇಂದಿನ ದಿನಮಾನದಲ್ಲಿ ವೃದ್ದಾಶ್ರಮಗಳು ಕಳವಳಿಕಾರಿಯಾಗಿದೆ. ಅವರ ಅಂತ್ಯ ಸಮಯದವರೆಗೂ ಮಕ್ಕಳಾದ ನಾವು ತಾಪತ್ರಯವಾಗದಂತೆ ನೋಡಿಕೊಳ್ಳಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ವಿಶ್ವದಾದ್ಯಂತ ತಾಯಿ ದಇನಾಚರಣೆಯ ನಾಮಕಾವಸ್ತೆಯಾಗದೇ ಅರ್ಥಪೂರ್ಣವಾದ ದಿನಾಚರಣೆಯಾಗಿ ಆಚರಿಸಬೇಕಾದುದು ನಮ್ಮ ನಿಮ್ಮೇಲ್ಲರ ಕರ್ತವ್ಯವಾಗಿದೆ. ತಾಯಿ ದೇವರಿಗೆ ಸಮಾನ ತಾಯಿಯನ್ನು ದೇವರಂತೆ ನೋಡಿಕೊಳ್ಳಬೇಕಾಗಿದೆ. ತಾಯಿ ದಿನಾಚರಣೆ ನಾಮಕವಸ್ತೆ ಯಾದರೆ ಅದು ಆರ್ಥಪೂರ್ಣವಾಗುವುದಿಲ್ಲ ಎಂದು ಸಂಜೆವಾಣಿ ವರದಿಗಾರರ ಜೊತೆಗೆ ಮಾತನಾಡುತ್ತಾ ಸಂಡೂರಿನ ತಹಶೀಲ್ದಾರ್ ರಾಷ್ಟ್ರೀಯ ನಾಡ ಹಬ್ಬ ಸಮಿತಿಯ ಅಧ್ಯಕ್ಷರು ಆದ ಜಿ. ಅನಿಲ್ ಕುಮಾರ ತಮ್ಮ ಮನದಾಳದ ಮಾತುಗಳನ್ನಾಡಿದರು.