ತಾಪಮಾನ ಏರಿಕೆ ಜನ ಕಂಗಾಲು

ಮುಳಬಾಗಿಲು ಏ ೮: ಬೇಸಿಗೆ ದಗೆ ಏರುತ್ತಿದ್ದಂತೆ ಜನರಿಗಲ್ಲದೇ ಪಶು ಪಕ್ಷಿಗಳು, ಜಾನುವಾರುಗಳಿಗೂ ಬಿಸಿಲಿನ ತಾಪ ತಡೆಯಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯವಾಗಿ ೩೫೦ ರಿಂದ ೩೮೦ ರಷ್ಟು ತಾಪಮಾನ ಮುಳಬಾಗಿಲಿನಲ್ಲಿ ಪ್ರತಿನಿತ್ಯ ಕಂಡು ಬರುತ್ತದೆ.
ಜನರು ಹಣ್ಣು ಹಂಪಲುಸೇವನೆ, ಎಳನೀರು, ತಂಪುಪಾನೀಯಗಳು ಕುಡಿಯುವ ಮೂಲಕ ದಣಿವಾರಿಸಿಕೊಳ್ಳುತ್ತಿದ್ದಾರೆ. ಆದರೆ ಕೋತಿಗಳೂ ಸಹಾ ಮನುಷ್ಯರಂತೆ ತಂಪು ಪಾನೀಯಗಳ ಮೊರೆ ಹೋಗುವುದು ವಿಶೇಷವಾಗಿದೆ. ಅಂಗಡಿ ಮುಂಗಟ್ಟುಗಳಲ್ಲಿ ತಂಪು ಪಾನೀಯಗಳು, ಎಳನೀರನ್ನು ಎತ್ತಿಕೊಂಡು ಹೋಗುವ ಕೋತಿಗಳು ಅವುಗಳನ್ನು ಸುಲಭವಾಗಿ ತೆಗೆದು ಸೇವನೆ ಮಾಡುವ ಮೂಲಕ ದಣಿವಾರಿಸಿಕೊಳ್ಳುತ್ತಿದೆ. ಇದರಿಂದ ಅಂಗಡಿ ಮಾಲೀಕರಿಗೆ ಒಂದಷ್ಟು ನಷ್ಟವಾಗುತ್ತಿದ್ದರೂ ನೋಡುವ ಸಾರ್ವಜನಿಕರಿಗೆ ಉಚಿತ ಮನೊರಂಜನೆ ಸಿಗುತ್ತಿದೆ.