ತಾಪಂ ಸ್ಥಾನ ಮೀಸಲಾತಿ ಅವೈಜ್ಞಾನಿಕ:ಲಕ್ಷ್ಮಣ ಆವುಂಟಿ

ಚಿಂಚೋಳಿ ಮೇ 3: ಚಿಂಚೋಳಿ ತಾಲೂಕಾ ಪಂಚಾಯತ ಸ್ಥಾನ ಮೀಸಲಾತಿ ಅವೈಜ್ಞಾನಿಕವಾಗಿ ಪ್ರಕಟಿಸಿದ್ದು ಅದನ್ನು ಸರಿಪಡಿಸಲು ಕೋಲಿ ಸಮಾಜದ ರಾಜ್ಯದ ಕಾರ್ಯದರ್ಶಿ ಲಕ್ಷ್ಮಣ ಆವುಂಟಿ ಮನವಿ ಮಾಡಿದ್ದಾರೆ.
ಪ್ರಸ್ತುತ ಚಿಂಚೋಳಿ ತಾಲೂಕಾ ಪಂಚಾಯತಿಗೆ ಮೀಸಲಾತಿ ಪ್ರಕಟಿಸಿದ್ದು ಕಲ್ಬುರ್ಗಿ ಜಿಲ್ಲೆಯ ಎಲ್ಲಾ ತಾಲೂಕಾಗಳಿಗೆ ಹಿಂದುಳಿದ ” ಅ”ವರ್ಗಕ್ಕೆ 2-3 ಸ್ಥಾನ ನಿಗದಿ ಪಡಿಸಲಾಗಿದೆ ಆದರೆ ಚಿಂಚೋಳಿ ತಾಲೂಕು ಶೇ 60 ಹಿಂದುಳಿದ ವರ್ಗದವರನ್ನು ಹೊಂದಿರುವ ತಾಲೂಕು ಆಗಿದ್ದು, ಇಲ್ಲಿ 15 ಸ್ಥಾನಗಳಲ್ಲಿ ಒಂದೆ ಒಂದು ಸ್ಥಾನ ನೀಡದಿರುವದು ಖೇದನಿಯವಾಗಿದೆ. ಇಲ್ಲಿಯ ಅಧಿಕಾರಿಗಳ ಹಾಗೂ ಚುನಾವಣಾ ಆಯೋಗದ ಅವೈಜ್ಞಾನಿಕ ಮತ್ತು ತಪ್ಪು ಮಾಹಿತಿಯಿಂದ ಸಂಪೂರ್ಣವಾಗಿ ದೋಷಪೂರಿತವಾಗಿದ್ದು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸುಮಾರು 12 ಕ್ಕು ಹೆಚ್ಚು ಸಮುದಾಯಗಳ ಹಕ್ಕು ಮೊಟಕುಗೊಂಡಂತಾಗಿದ್ದು ಸದರಿ ಸಮುದಾಯಗಳು ಬೀದಿಗಿಳಿಯುವ ಮೊದಲು ಚುನಾವಣೆ ಬಹಿಷ್ಕರಿಸುವ ಪೂರ್ವದಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈಗಿನ ಮೀಸಲಾತಿ ಆದೇಶವನ್ನು ರದ್ದುಪಡಿಸಿ ಚಿಂಚೋಳಿ ತಾಲೂಕಿಗೆ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ 3 ಸ್ಥಾನಗಳಾದರು ಹಿಂದುಳಿದ “ಅ” ವರ್ಗಕ್ಕೆ ಮಿಸಲಾತಿ ನೀಡಿ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ತಾಲೂಕಿನ ಸಮಸ್ತ ಹಿಂದುಳಿದ ಅಲ್ಪ ಸಂಖ್ಯಾತರ ಪರವಾಗಿ ಮನವಿಯನ್ನು ಕರ್ನಾಟಕ ರಾಜ್ಯ ಕೋಲಿ ಗಂಗಾಮತ ಸಮಾಜದ ಕಾರ್ಯದರ್ಶಿ ಲಕ್ಷ್ಮಣ ಆವುಂಟಿ. ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ