ತಾಪಂ ನೂತನ ಇಒ ಖಾಲೀದ್ ಅಲಿ ಅಧಿಕಾರ ಸ್ವೀಕಾರ

ಹುಲಸೂರ: ಮೇ.18:ಇಲ್ಲಿನ ತಾಲ್ಲೂಕು ಪಂಚಾಯತ್‍ನ ನೂತನ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಖಾಲೀದ್ ಅಲಿ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು.

ಹಾಲಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ತಾಂಡೂರ್ ಅಧಿಕಾರ ಹಸ್ತಾಂತರಿಸಿ ಖಾಲೀದ್ ಅಲಿ ಅವರನ್ನು ಬರಮಾಡಿಕೊಂಡರು. ಇದೇ ವೇಳೆ ತಾಪಂ ಸಿಬ್ಬಂದಿ ಸಂತೋಷ್ ತಾಂಡೂರ್ ಅವರಿಗೆ ಸನ್ಮಾನಿಸಿದರು.

ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಜಯಪ್ರಕಾಶ ಚವ್ಹಾಣ, ಹುಲಸೂರ ಗ್ರಾಪಂ ಪಿಡಿಒ ಭೀಮಶೆಪ್ಪ ದಂಡೀನ್, ತಾಲ್ಲೂಕು ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ್ ನಾವದಗಿ, ತಾಲ್ಲೂಕು ಐಇಸಿ ಸಂಯೋಜಕ ಗಣಪತಿ ಹರಕೂಡೆ, ಬಸವರಾಜ ಬಾಲಕುಂದೆ, ತಾನಾಜಿ ಇನ್ನಿತರರಿದ್ದರು.