ತಾಪಂ ಕ್ಷೇತ್ರ ಮೀಸಲಾತಿ ಮರುಪರಿಶೀಲನೆಗೆ ಆಗ್ರಹ

ಚಿಂಚೋಳಿ ಮೇ 2: ರಾಜ್ಯ ಚುನಾವಣೆ ಆಯೋಗವು ಜಿಲ್ಲಾ ಪಂಚಾಯತ ಮತ್ತು ತಾಲೂಕ ಪಂಚಾಯತ ಚುನಾವಣೆಯ ಮೀಸಲಾತಿಗಳನ್ನು ಮೊನ್ನೆ ಪ್ರಕಟನೆ ಮಾಡಿದ್ದು ಅದರಲ್ಲಿ ಚಿಂಚೋಳಿಯ 15 ತಾಲೂಕು ಪಂಚಾಯಿತಿಗಳಲ್ಲಿ ಬಿಸಿಬಿ ಮತ್ತು ಬಿಸಿಎ. ಕೆಟಗರಿಯಲ್ಲಿ ನೀಡದೆ ಚಿಂಚೋಳಿ ತಾಲೂಕಿನ ಬಿಸಿಬಿ ಮತ್ತು ಬಿಸಿಎ. ಒಳಪಡುವ ಸಮಾಜದವರಿಗೆ ಅನ್ಯಾಯ ಮಾಡಿದ್ದು ಕೂಡಲೇ ಆಯೋಗವು ಕೆಟಗಿರಿ ಬಗ್ಗೆ ಮರು ಪರಿಶೀಲನೆ ಮಾಡಿ ಸರಿಪಡಿಸಬೇಕು ಎಂದು ಚಿಂಚೋಳಿ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅನೀಲ ಕುಮಾರ್ ಜಮಾದಾರ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ ಚುನಾವಣೆ ಕೆಟಗರಿಯಲ್ಲಿ ಲೋಕಸಭೆಯ ಸದಸ್ಯರು ಮತ್ತು ಶಾಸಕರ ಕೈವಾಡ ಇದೆ ಎಂದು ಎದ್ದು ಕಾಣುತ್ತಿದ್ದು ಎಂದು ಆರೋಪಿಸಿದರು.ಇದರ ಬಗ್ಗೆ ಚುನಾವಣೆ ಆಯೋಗವು ಪುನಃ ಪರಿಶೀಲನೆ ಮಾಡಿ ಯಾವುದೇ ಸಮಾಜಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಅನೀಲ ಕುಮಾರ್ ಜಮಾದಾರ್ ಅವರು ಆಗ್ರಹಿಸಿದರು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶರಣು ಪಾಟೀಲ ಮೋತಕಪಲ್ಲಿ. ಅಬ್ದುಲ್ ಬಾಸಿದ್. ಗಂಗಾಧರ್ ಗಡ್ಡಿಮನಿ. ಅನ್ವರ್ ಖತೀಬ್. ಅಯೂಬ್ ಖಾನ್. ಬಸವರಾಜ್ ಕಡಬೂರ. ನಾಗೇಶ ಗುಣಾಜಿ. ಕೃಷ್ಣ ಬಿರಾಪೂರ್. ರೇವಣಸಿದ್ದಪ್ಪ ಪೂಜಾರಿ ಅಣ್ಣವಾರ್. ವೆಂಕಟೇಶ. ಮಲ್ಲಿಕಾರ್ಜುನ್. ಚಂದ ಪಟೇಲ್. ಇದ್ದರು