ತಾಪಂ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ

ಬೀದರ್: ಏ.15:ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ಬೀದರ್ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಡಾ.ಬಿ.ಆರ.ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಆಚರಿಸಲಾಯಿತು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ತಾಪಂ ಬೀದರಿನ ಕಾರ್ಯನಿರ್ವಾಹಕ ಅಧಿಕಾರಿ ಗೌತಮ ಅರಳಿ ಅವರು ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ಲಕ್ಷ್ಮೀ ಬಿರಾದಾರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಸಂಜಯ ಕುಮಾರ್, ತಾಪಂ ವ್ಯವಸ್ಥಾಪಕರಾದ ಮುನಫ್ ಪಟೇಲ್, ತಾಂತ್ರಿಕ ಸಂಯೋಜಕರು ವಿಷ್ಣು ಕುಲಕರ್ಣಿ, ತಾಲೂಕು ಸಂಯೋಜಕರು ಸತ್ಯಜೀತ್ ನೀಡೋದಾಕರ್, ಪ್ರಣಿತಾ,ಯೋಗಿನಿ ಲದ್ದೆ, ಭೀಮಾಂಜಲಿ ಮುದ್ದಾ,ಸಂಜೀವ ಕುಮರ ಹಳ್ಳಿ, ಸಂಗೀತ ಸ್ವಾಮಿ ಹಾಗೂ ಸಿಬ್ಬಂದಿಗಳಿದ್ದರು.