ತಾನು ನೀರು ತುಂಬಿಸಿದ ಕೆರೆಯ ಮುಂದೆ ನಿಂತು ಸಾರ್ಥಕಭಾವದ ಸೇಲ್ಫಿ ಕ್ಲಿಕಿಸಿದ ಮಂಜುನಾಥ್

ಹುಣಸೂರು,ನ.23:- ದಶಕಗಳಿಂದ ಬರಿದಾಗಿದ್ದ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಬೃಹತ್ ಕೆರೆಗೆ ಸತತ ಪ್ರಯತ್ನ ನಡೆಸಿ ಸುಮಾರು 10ಕೋಟಿ ವ್ಯಯಿಸಿ ಕಳೆದ ಮೂರು ನಾಲ್ಕು ವರ್ಷಗಳ ಹಿಂದೆಏತ ನೀರಾವರಿ ಮೂಲಕ ನೀರು ತುಂಬಿಸಿದ ಕೆರೆಗೆ ಅಚಾನಕ್ಕಾಗಿ ಭೇಟಿ ನೀಡಿದ ಶಾಸಕ ಹೆಚ್.ಪಿ.ಮಂಜುನಾಥ್ ಕೆರೆ ತುಂಬಿ ತುಳುಕುತ್ತಿರುವ ಜೊತೆಗೆ ರೈತರಿಗೆ ಅನುಕೂಲವಾಗುತ್ತಿರುವ ವಿಷಯ ತಿಳಿದು ಸಾರ್ಥಕಭಾವದಿಂದ ಸೆಲ್ಫಿತೆಗೆದುಕೊಂಡು ಸಂಭ್ರಮಿಸಿದರು.
ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275 ಪಕ್ಕದಲ್ಲೇ ಇರುವ ಬಿಳಿಕೆರೆ ಗ್ರಾಮದಕೆರೆ ಬತ್ತಿದಕಾರಣ ಕಸ ಸುರಿಯಲು ಉಪಯೋಗಿಸುತ್ತಿದ ಜನತೆ ಹಾಗೂ ವ್ಯಾಪರಸ್ಥರು ಇಂದು ರೈತರೊಂದಿಗೆ ಅವರು ಸಂಭ್ರಮಿಸುವಂತಾಗಿದೆ.
ಈ ಹಿಂದೆಕೆರೆ ಅಂಗಳದ ಸುತ್ತಸಾಮಾಜಿಕ ಅರಣ್ಯ ವಿಭಾಗದಿಂದ ಸಸಿಗಳನ್ನು ನೆಟ್ಟಿದು ಅವು ಕೂಡ ಮರಗಳಾಗಿ ಬೆಳೆದು ಸುಂದರತಾಣವಾಗಿ ಕಂಗೊಳಿಸುತ್ತಿದೆ.
ಮಳೆಗಾಲದಲ್ಲಿ ಅಲ್ಪ ಪ್ರಮಾಣದ ನೀರು ಕೆರೆ ಸೇರುತಿತ್ತಾದರೂ ಕೆಲವೇ ದಿನದಲ್ಲಿಅದೂ ಸಹ ಬತ್ತಿಹೂಗುತ್ತಿತ್ತು. ಇದನ್ನು ಮನಗಂಡ ಶಾಸಕ ಹೆಚ್.ಪಿ.ಮಂಜುನಾಥ್ ಕೆರೆಗೆ ನೀರು ತುಂಬಿಸಿ ಈ ಭಾಗದಜನರ ಬದುಕು ಹಸನಾಗಿಸಲು ಟೊಂಕಕಟ್ಟಿ ನೀರಾವರಿ ಇಲಾಖೆ ಮೂಲಕ ಕ್ರಿಯಾ ಯೋಜನೆ ರೂಪಿಸಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ ತಂಗಡಗಿ ಗಮನಕ್ಕೆ ತಂದು 10 ಕೋಟಿರೂ ವೆಚ್ಚದಲ್ಲಿ ಲಕ್ಷ್ಮಣತೀರ್ಥ ನದಿಯಿಂದ ಏತ ನೀರಾವರಿಯೋಜನೆ ಮೂಲಕ ಬಿಳಿಕೆರೆ ಗ್ರಾಮದ ಕೆರೆ ಮಾತ್ರವಲ್ಲದೆ ಮಲ್ಲಿನಾಥಪುರ, ಜೀನಹಳ್ಳಿ ಹಾಗೂ ಹಳೆಬೀಡು ಕೆರೆಗೂ ನೀರುತುಂಬಿಸುವ ಮೂಲಕ 2017ರಲ್ಲಿ ಯೋಜನೆಸಾಕಾರಗೊಂಡವು.
ಕೆಲವರು ಅಯ್ಯೋ ಈ ಕೆರೆತುಂಬುತ್ತದೆಯೇ? ಕೆರೆ ತುಂಬಿದರೂ ನೀರು ನಿಲ್ಲುತ್ತಾ, ಬರೀ ಹಣ ಖರ್ಚು ಎಂದು ಭಾವಿಸಿದ್ದು ಉಂಟು.ಆದರೆಕೆರೆತುಂಬಿದ ನಂತರ ಸುತ್ತಮುತ್ತಲಿನ ಸುಮಾರು 8 ಕಿ.ಮೀ ವ್ಯಾಪ್ತಿಯ ಗ್ರಾಮಗಳಲ್ಲಿ ಹತ್ತಾರು ವರ್ಷಗಳಿಂದ ಬರಿದಾಗಿದ್ದ ಬೋರ್ ವೆಲ್‍ಗಳಲ್ಲಿ ಅಂತರ್ಜಲ ವೃದ್ದಿಸತೊಡಗಿತು. ಕೆಲವು ಬೋರ್‍ವೆಲ್‍ಗಳಲ್ಲಿ ಹಗಲು ರಾತ್ರಿಎನ್ನದೆ ನೀರು ಉಕ್ಕಿ ಇಂದಿಗೂ ಹರಿಯುತ್ತಲೇಇದೆ.
ಸುತ್ತಮುತ್ತಲಿನ ರೈತರಒಣಗಿ ನಿಂತಿದತೆಂಗು, ಮಾವಿನ ತೋಟಗಳು ಇದೀಗ ನಳ ನಳಿಸುತ್ತಿವೆ. ದೂರದ ಊರಿಗೆ ಕೂಲಿಗೆ ಹೋಗುತ್ತಿದ್ದರೈತರು ಇದೀಗ ತಮ್ಮ ಜಮೀನಿನಲ್ಲೇ ದುಡಿಮೆ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಈ ಕೆರೆಯ ಸುತ್ತಮುತ್ತಲಿನ 8-10 ಕಿ.ಮೀ ವ್ಯಾಪ್ತಿಯ ಗ್ರಾಮಗಳ ರೈತರ ಬದುಕು ಹಸನಾಗಿದೆಯಲ್ಲದೆ, ಸಮೃದ್ದಕುಡಿಯುವ ನೀರು ಸರಬರಾಜಾಗುತ್ತಿದೆ. ಹಳ್ಳಿಗರು ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.