ತಾನೀಶ್ ಸಾಧನೆಗೆ ಪುರಸ್ಕಾರ

ಕೋಲಾರ :- ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ಶ್ರೀಮತಿ ಶ್ವೇತಾ ನಾಗರಾಜ್ ಮತ್ತು ನಾಗರಾಜ್ ದಂಪತಿಗಳ ಪುತ್ರನಾದ ಇಂಡಿಯನ್ ಬುಕ್ ಆಫ್ ವರ್ಡ್ ರೆಕಾರ್ಡ್ ಸಾಧಕ ೨ ವರ್ಷ ೪ ತಿಂಗಳ ಎನ್ ತಾನೀಶ್ ಮಾಡಿರುವ ಮಹತ್ತರ ಸಾಧನೆಗಳನ್ನು ಗುರುತಿಸಿ ಬೆಂಗಳೂರಿನ ರೈಲು ಗಾಲಿ ಕಾರ್ಖಾನೆ, ಯಲಹಂಕದ ಲಲಿತ ಕಲಾ ಸಂಘದ ವತಿಯಿಂದ ಆಯೋಜಿಸಿದ್ದ ೬೫ ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರತಿಭಾ ಸನ್ಮಾನವನ್ನು ಮಾಡಲಾಯಿತು.

ಕಂದ ತಾನೀಶ್ ಸಾಧನೆಗೆ ಪ್ರಶಂಸಿದ ಯಲಹಂಕ ಶಾಸಕ ಹಾಗೂ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್.ಆರ್.ವಿಶ್ವನಾಥ್ ಸನ್ಮಾನಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಹೊರಹೆಕ್ಕಿ ತರುವ ಹಾಗೂ ಅದನ್ನು ಎಲ್ಲೆಡೆ ಪಸರಿಸುವ ಕಾರ್ಯವನ್ನು ಮೊದಲು ಪ್ರತಿಯೋಬ್ಬ ಪೋಷಕರು ಮನೆಯಿಂದ ಮಾಡಬೇಕು ಈ ಮೂಲಕ ಮಗುವಿನ ಜ್ಞಾನ, ಆಸಕ್ತಿದಾಯಕ ಅಂಶಗಳು ಬೆಳಕಿಗೆ ಬರುತ್ತದೆ. ಕೋಲಾರ ಜಿಲ್ಲೆಯ ೪ ದಾಖಲೆಗಳ ಸಣ್ಣ ವಯಸ್ಸಿನ ಮಗುವಿನ ಸಾಧನೆ ಇಡೀ ನಮ್ಮ ಭಾರತ ದೇಶದ ಎಲ್ಲಾ ಮಕ್ಕಳಿಗೂ ಸ್ಪೂರ್ತಿ ಕಂದ ಮತ್ತಷ್ಟು ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಉತ್ತಮ ಹೆಸರು ತರಲಿ ಎಂದು ಮಗುವಿನ ತಂದೆ, ತಾಯಿಯವರಿಗೆ ನಾನು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಕವಿಯತ್ರಿ ಮಂಜುಳ.ಬಿ.ವಿ, ಸಮಾಜ ಸೇವಕ ಡಾ.ಶಶಿಕುಮಾರ್, ಕಾರ್ಯಾಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ಇಮ್ರಾನ್, ಇತರೆ ಪದಾಧಿಕಾರಿಗಳು ಹಾಜರಿದ್ದರು.