ತಾತ ಮೊಮ್ಮಗನ ಭಾವುಕ ಸನ್ನಿವೇಶ

“ಶ್ರೀಮಂತಿಕೆಯ ಅಹಂ ಒಂದೆಡೆಯಾದರೆ ಮತ್ತೊಬ್ಬರನ್ನು ನೋಡುವ ದಾಟಿಯೇ ಬೇರೆ.ಮೇಲಾಗಿ ಹಾಸ್ಯ ಪ್ರಜ್ಞೆಯೂ ಇದೆ. ತಾತ ಮೊಮ್ಮಗನ ನಡುವಿನ ಕತೆ. ನೆಗಟೀವ್  ಮತ್ತು  ಪಾಸಿಟೀವ್  ಇರುವ ವಿಭಿನ್ನ ಪಾತ್ರ..”

“ತಿಮ್ಮಯ್ಯ ಅಂಡ್ ತಿಮ್ಮಯ್ಯ” ಚಿತ್ರದ ಪಾತ್ರದ ಕುರಿತು ಹೀಗಂತ ಮಾತಿಗಿಳಿದರು ಹಿರಿಯ ನಟ ಅನಂತ್ ನಾಗ್. ಚಿತ್ರದಲ್ಲಿ ತಾತ ಮೊಮ್ಮಗನ ನಡುವೆ ಭಾವುಕ ಸನ್ನಿವೇಶಗಳಿವೆ. ಇದುವರೆಗಿನ ಪಾತ್ರಗಳಲ್ಲಿಯೇ ತೀರಾ ವಿಭಿನ್ನ ಪಾತ್ರ. ತಾತನಾಗಿ ಜೀವನದ ದಿಕ್ಕು ಬದಲಾಯಿಸುವಂತದ್ದು ಎಂದು ಹೇಳಿಕೊಂಡರು.

ಅಮೇರಿಕಾ ತೆರಳುತ್ತಿದ್ದ ಈ ಹಿನ್ನೆಲೆಯಲ್ಲಿ ಪತ್ರಕರ್ತರನ್ನು ಭೇಟಿ ಮಾಡಿದ್ದೇನೆ. ನಟ ದಿಗಂತ್ ಮತ್ತು ನಾನು ತಾತ ಮೊಮ್ಮಗನ ಪಾತ್ರ ಮಾಡಿದ್ದೇವೆ. ನೋಡುಗರಿಗೆ ಚಿತ್ರ ಇಷ್ಟವಾಗಲಿದೆ.‌ ಮೊಮ್ಮಗ ವಿದೇಶದಿಂದ  ಅಜ್ಜನ ಭೇಟಿಯಾಗುತ್ತಾನೆ.ಇಬ್ಬರೂ ವಿಭಿನ್ನಪಾತ್ರ. ಯಾವ ರೀತಿ ರೀತಿ ನಡೆಯುತ್ತದೆ ಎನ್ನುವ ಕಥನ ಹೊಂದಿದೆ ಎನ್ನುವುದು ಚಿತ್ರದ ತಿರುಳು.

ಸಂಕಲ್ಪ ಚಿತ್ರದಿಂದ ಆರಂಭವಾದ ನಟನೆ, ಹಂಸಗೀತೆ  ನಾ ನಿನ್ನ ಬಿಡಲಾರೆ  ಹೀಗೆ ಚಿತ್ರರಂಗದಲ್ಲಿ ಸುದೀರ್ಘ ಪಯಣಕ್ಕೆ ನಾಂದಿ ಹಾಡಿದೆ. ಬೇರೆಬೇರೆ ಪಾತ್ರ ಸಿಕ್ಕಿದೆ. ಎಲ್ಲವನ್ನೂ ನಿಭಾಯಿಸಿದೆ. ಚಿ.ಉದಯ್ ಶಂಕರ್ ಕೆವಿ ಜಯರಾಮ್ ಸೇರಿದಂತೆ ಅನೇಕರು ಒಳ್ಳೆ ಕಥೆ ಮಾಡಿದ್ದರ ಫಲ  ಈ ಹಂತಕ್ಕೆ ಬಂದಿದ್ದೇನೆ ಎನ್ನುವ ಹಳೆಯ ದಿನಗಳನ್ನು ಮೆಲುಕು ಹಾಕಿದರು.

ನಿರ್ಮಾಪಕ ರಾಜೇಶ್ ಶರ್ಮಾ, ಸಿನಿಮಾ ಮುಂದಿನವಾರ  ಬಿಡುಗಡೆ ಯಾಗುತ್ತಿದೆ ಸಹಕಾರವಿರಲಿ ಎಂದರೆ  ನಿರ್ದೇಶಕ ಸಂಜಯ್ ಶರ್ಮಾ ಅನಂತ್ ನಾಗ್ ಅವದೃಷ್ಠಿಯಲ್ಲಿಟ್ಟುಕೊಂಡು ಕಥೆ ಮಾಡಿದ್ದೆವು.

ತಾತ ಮೊಮ್ಮಗನ ಕಥೆ ,30 ವರ್ಷದ ನಂತರ ಬೇಟಿ ಆದಾಗ ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ತಿರುಳು ಎಂದು ಮಾಹಿತಿ‌ಹಂಚಿಕೊಂಡರು. ಚಿತ್ರದಲ್ಲಿ  ಐಂದಿತಾ ರೇ, ಶುಭ್ರ ಅಯ್ಯಪ್ಪ, ಪ್ರಕಾಶ್ ತಮ್ಮಿನಾಡು, ರುಕ್ಮುಣಿ ವಿಜಯ್ ಕುಮಾರ್, ಚೈತ್ರಾ ರಾವ್ ಮತ್ತಿತರಿದ್ದಾರೆ‌.