ತಾತ್ಕಾಲಿಕ ಶೆಡ್, ಭೂಕಂಪನ ಮಾಪನ ಕೇಂದ್ರ ಸ್ಥಾಪನೆಗೆ ಸುಭಾಷ್ ರಾಠೋಡ್ ಅಗ್ರಹ

ಚಿಂಚೋಳಿ,ಸೆ.3- ತಾಲೂಕಿನ ದಸ್ತಾಪೂರ, ಇಂದ್ರಪಾಡ ಹೊಸಳ್ಳಿ, ಚಿಮ್ಮದ್ಲಾಯಿ ಗ್ರಾಮಗಳಲ್ಲಿ ಕಳೆದ ಅಗಸ್ಟ 31ರ ರಾತ್ರಿ 11 ಗಂಟೆಗೆ ಭೂಮಿಯಿಂದ ಭಯಾನಕ ಶಬ್ದ ಬಂದು ಕಂಪನ ಉಂಟಾಗಿರುವುದು, ಇಲ್ಲಿನ ನಾಗರಿಕರು ಭಯಭಿತಿಗೊಂಡಿದ್ದಾರೆ. ಇವರೆಲ್ಲರ ಸುಕ್ಷತೆಯ ಹಿತದೃಷ್ಠಿಯಿಂದ ತಾತ್ಕಾಲಿಕ ಶೆಡ್ ಹಾಗೂ ಭೂಕಂಪನ ಮಾಪನ ಕೇಂದ್ರವನ್ನು ಸ್ಥಾಪಿಸುವಂತೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಭಾಷ್ ವ್ಹಿ. ರಾಠೋಡ್ ಅವರು ಒತ್ತಾಯಿಸಿದ್ದಾರೆ.
ತಾಲೂಕಿನ ಇಂದ್ರಪಾಡ ಹೊಸಳ್ಳಿ, ದಸ್ತಾಪುರ, ಚಿಮ್ಮಾ ಇದಲಾಯಿ, ಗ್ರಾಮಗಳಿಗೆ ಭೇಟಿ ನೀಡಿದ ಅವರು, ಭಯ ಭೀತರಾದ ಜನರಿಗೆ ಧೈರ್ಯ ತುಂಬಿ ಮಾತನಾಡಿ, ಕೆಲವು ಹಳ್ಳಿಗಳಲ್ಲಿ ಈ ಶಬ್ದಗಳಿಗೆ ಮತ್ತು ಕಂಪನಗಳಿಗೆ ಹೆದರಿ ಜನರು ತಮ್ಮ ಮನೆಯ ಹೊರಗಡೆ ಅಂಗಳದಲ್ಲಿ ಮಲಗುತ್ತಿದ್ದಾರೆ.
ಶಬ್ದದ ಭಯಾನಕತೆಯಿಂದ ಅನೇಕರು ಮನೆ ಬಿಟ್ಟಿದ್ದಾರೆ. ಕಾರಣ ಭಯ ಭೀತರಾಗಿರುವ ಸದರಿ ಜನರ ನೆರವಿಗೆ ಸರಕಾರ ಕೂಡಲೇ ಸ್ಪಂದಿಸಿ ತ್ವರಿತವಾಗಿ ಭಯ ಸೃಷ್ಟಿಯಾಗಿರುವ ಹಳ್ಳಿಗಳಲ್ಲಿ ಪ್ರತಿ ಮನೆಗೆ ಅವರವರ ಅಂಗಳಗಳಲ್ಲಿ ತಾತ್ಕಾಲಿಕ ಶೆಡ್ ಗಳ ನಿರ್ಮಾಣಕ್ಕಾಗಿ ನೆರವು ನೀಡಬೇಕು.
ಈ ಭಾಗದಲ್ಲಿ ಭೂಕಂಪನ ಮಾಪನ ಕೇಂದ್ರ ಸ್ಥಾಪನೆಯಾಗಬೇಕು.
ಈ ಮಳೆಗಾಲ ಮುಗಿದ ನಂತರ ಚಳಿಗಾಲ ಪ್ರಾರಂಭವಾಗಲಿದ್ದು ಶೆಡ್ ವ್ಯವಸ್ಥೆ ಆಗದಿದ್ದರೆ ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಕಾರಣ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಮುತುವರ್ಜಿವಹಿಸಿ ಸದರಿ ಬೇಡಿಕೆಗಳು ಇಡೇರಿಸಬೇಕೆಂದು ಅವರು ಅಗ್ರಹಿಸಿದರು.
ಅವರೊಂದಿಗೆ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಬಸವರಾಜ ಮಾಲಿ, ಪುರಸಭೆ ಮಾಜಿ ಉಪಾಧ್ಯಕ್ಷರು ಸಯ್ಯದ್ ಶಬ್ಬೀರ್,
ಕಾಂಗ್ರೆಸ್ ಪಕ್ಷದ ಮುಖಂಡರಾದ ಶರಣು ಪಾಟೀಲ್, ಖಲೀಲ್ ಪಟೇಲ್, ಮಹಮ್ಮದ್ ಹಾದಿಸಾಬ್, ಜಗನ್ನಾಥ ಗುತ್ತೇದಾರ, ಅನ್ವರ್ ಖತೀಬ್, ಚಿಂಚೋಳಿ ಹಿಂದುಳಿದ ಘಟಕದ ಅಧ್ಯಕ್ಷರು ಸುರೇಶ ಭಂಟ್ಟಾ, ಚಿಂಚೋಳಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು ನಾಗೇಶ ಗುಣಾಜಿ ಚಿಂಚೋಳಿ ಬ್ಲಾಕ್ ಪರಿಶಿಷ್ಟ ಘಟಕದ ಅಧ್ಯಕ್ಷರು ಸಂತೋಷ ಗುತ್ತೇದಾರ, ಮುಖಂಡರುಗಳಾದ ಮಲ್ಲಿಕಾರ್ಜುನ ಕೋಟಪಲ್ಲಿ, ಸುಂದರ ನಿರಾಳಕರ್, ರಾಜಶೇಖರ್ ಪಾಟೀಲ್, ರೇವಣಸಿದ್ದಪ್ಪ ಪೂಜಾರಿ, ಸಯ್ಯದ್ ಮಾಜೀದ್ ಪಾಟೀಲ್, ಅಕ್ಬರ್ ಪಟೇಲ್, ನವಾಜ್ ಪಟೇಲ್, ರಮೇಶ ವಾರ್ಕರ್, ರಸೂಲ್ ಪಟೇಲ್, ಯಲ್ಲಾಲಿಂಗ ಕಮಲಾಕಾರ್, ಮಹಮ್ಮದ್ ಇಸಾ, ಖಾಜಾ ಪಟೇಲ್, ಸುನೀಲ್ ತ್ರಿಪಾಟಿ, ಸಿದ್ದು ಪೂಜಾರಿ, ಮತ್ತು ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.