ತಾತ್ಕಾಲಿಕವಾಗಿ ಅಂಚೆ ಕಚೇರಿಗಳ ಸಮಯದಲ್ಲಿ ಬದಲಾವಣೆ

ಕಲಬುರಗಿ.ಏ.28:ಕೊವೀಡ್-19 ಮಹಾಮಾರಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರವು 14 ದಿನಗಳ ಕಾಲ ಕೊರೋನಾ ಕಫ್ರ್ಯೂ ಘೋಷಿಸಿದೆ. ಇದರ ಹಿನ್ನೆಲೆಯಲ್ಲಿ ಕಲಬುರಗಿ ಅಂಚೆ ವಿಭಾಗದ (ಕಲಬುರಗಿ ಮತ್ತು ಯಾದಗಿರಿ) ಎಲ್ಲಾ ಅಂಚೆ ಕಚೇರಿಗಳ ಕೆಲಸ ಸಮಯವನ್ನು ಇದೇ ಏಪ್ರಿಲ್ 28 ರಿಂದ 2021ರ ಮೇ 12 ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸಮಯವನ್ನು ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಅಂಚೆ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕರಾದ ಬಿ.ಆರ್. ನನಜಗಿ ಅವರು ತಿಳಿಸಿದ್ದಾರೆ.

  ಸಾರ್ವಜನಿಕರು, ಗ್ರಾಹಕರು ಅಂಚೆ ಕಚೇರಿಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಜರ್ ಬಳಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಕೋವಿಡ್-19 ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕೆಂದು ಅವರು ತಿಳಿಸಿದ್ದಾರೆ.