ತಾತಯ್ಯ ತತ್ವಪದ ಗಾಯನ ಕಾರ್ಯಕ್ರಮ

ಕೋಲಾರ,ಮೇ,೨:ತಾಲೂಕಿನ ಬಳಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀದೇವಿ ಭೂದೇವಿ ಸಮೇತ ಶ್ರೀ ಸತ್ಯನಾರಾಯಣ ಸ್ವಾಮಿ ಹಾಗೂ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶೆಟ್ಟಿವಾರಹಳ್ಳಿ ಎಸ್.ಎನ್.ರೆಡ್ಡಪ್ಪ ಅವರ ನೇತೃತ್ವದಲ್ಲಿ ಏ,೨೯ರ ಸೋಮವಾರ ರಾತ್ರಿ ೯ ಗಂಟೆಗೆ ಕೈವಾರ ತಾತಯ್ಯನವರ ತತ್ವಪದ ಮತ್ತು ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಕೀಲ ಬಳಗೆರೆ ಬಿ.ಎಂ.ನಾರಾಯಣ ಗೌಡ ಕಾರ್ಯಕ್ರಮವನ್ನು ಉದ್ಗಾಟಿಸಿ ದರು. ಮದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೆಟ್ಟಿವಾರಹಳ್ಳಿ ಎಸ್.ಎಂ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮದ್ದೇರಿ ಪಿ.ಮುನಿರೆಡ್ಡಿ, ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಅಧ್ಯಕ್ಷ ಚಿಟ್ನಹಳ್ಳಿ ಸಿ.ಎಲ್.ಗೋಪಾಲಕೃಷ್ಣಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಚಂದ್ರೇಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಮುಳ್ಳಹಳ್ಳಿ ಬಿ.ವಿ ವೆಂಕಟೇಶಗೌಡ, ಬಳಗೆರೆ ಸುಧಾರಾಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಜನಾ ತಂಡಗಳಾದ ಬಳಗೆರೆ ಭಜನಾ ತಂಡ ಬಿ.ಎಂ.ಚನ್ನಕೃಷ್ಣೇಗೌಡ, ಬಿ.ಇ.ಶ್ರೀನಿವಾಸ್ ರೆಡ್ಡಿ, ಬಿ,ಇ.ವೆಂಕಟೇಶರೆಡ್ಡಿ, ಬಿ.ಎಂ.ನಾರಾಯಣಸ್ವಾಮಿ, ಬಿ.ವಿ.ಮಂಜುನಾಥ್, ಎಲ್ಲಮ್ಮ ಮತ್ತು ತಂಡದವರು, ವಿ.ಪಾಳ್ಯ ಭಜನಾ ತಂಡ ವಿ ಆಂಜನಪ್ಪ, ಶೆಟ್ಟಿವಾರಹಳ್ಳಿ ಭಜನಾ ತಂಡ ಪಾರ್ವತಮ್ಮ, ಕೃಷ್ಣಮ್ಮ, ಗುರುಪ್ರಸಾದ್, ಎಸ್.ಆರ್.ವೆಂಕಟಾಚಲಪತಿ, ಚಿಕ್ಕ ರೆಡ್ಡಮ್ಮ, ಎಸ್.ವಿ.ನಾಗರಾಜ್, ಮುಳ್ಳಹಳ್ಳಿ ಭಜನಾ ತಂಡ ಎಂ.ವಿ.ನಾರಾಯಣಸ್ವಾಮಿ, ಬಿ.ಎಂ.ನಂಜುಂಡಪ್ಪ, ಪಿ.ಮುನಿವೆಂಕಟ ರಾಮೇಗೌಡ ಮತ್ತು ತಂಡದವರು, ಮದನಹಳ್ಳಿ ಬಜನಾ ತಂಡ ಎಂ.ಸಾಗರ್ ರೆಡ್ಡಿ, ಲಕ್ಷ್ಮಮ್ಮ, ಚಿಕ್ಕನಾರಾಯಣಪ್ಪ ಮತ್ತು ಸುತ್ತಮುತ್ತ ಗ್ರಾಮದ ತಂಡಗಳು ಭಾಗವಹಿಸಿದ್ದರು.
ದೊಡ್ಡ ಬನಹಳ್ಳಿ ಆರ್ ಗುರುಮೂರ್ತಿ, ಮೈಲಾಂಡಹಳ್ಳಿ ಕೃಷ್ಣಪ್ಪ, ಕುರುಬೂರು ಶಾಮಣ್ಣ, ಯಡಹಳ್ಳಿ ಅಶ್ವತಪ್ಪ, ಕುರುಬರು ರತ್ನಮ್ಮ, ಗಡದಾಸನಹಳ್ಳಿ ಶ್ರೀರಾಮಪ್ಪ, ಬಗಳಹಳ್ಳಿ ಭಜನಾ ತಂಡ ಶ್ರೀನಿವಾಸರೆಡ್ಡಿ, ರಾಮಕೃಷ್ಣಪ್ಪ, ಕೆಂಪಣ್ಣ, ವೆಂಕಟಮ್ಮ, ಲಕ್ಷ್ಮಮ್ಮ, ಪಣಸಚೌಡನಹಳ್ಳಿ ಭಜನಾ ತಂಡ ನಾರಾಯಣ ನಾಯಕ್, ಎಚ್.ನಾರಾಯಣಸ್ವಾಮಿ ಮತ್ತು ತಂಡ ಹಾರ್ಮೋನಿಯಂ ಎಸ್.ಎನ್ ರೆಡ್ಡಪ್ಪ, ಎಸ್.ಎಂ.ದ್ಯಾವಪ್ಪ ಶೆಟ್ಟಿವಾರಹಳ್ಳಿ ನಾರಾಯಣಸ್ವಾಮಿ, ಶೆಟ್ಟಿಮಾದ ಮಂಗಳ ತಬಲ ಎಂ.ಪ್ರಕಾಶ್, ಎಂ.ಸಿ.ವೆಂಕಟೇಶಪ್ಪ, ಮದನಹಳ್ಳಿ ಮುನಿ ನಾರಾಯಣಸ್ವಾಮಿ, ಎಸ್.ಎ.ರಾಜಪ್ಪ, ಎಂ.ನಾಗೇಶ್ ಮತ್ತು ಬಳಗೆರೆ ಗ್ರಾಮಸ್ಥರಾದ ನರಸಿಂಹ ನಾಯಕ, ಬಿ.ವಿ.ವೇಣುಗೋಪಾಲ್, ಕಿಟ್ಟಪ್ಪ, ದೇವಾಲಯದ ಅರ್ಚಕ ಅಮರನಾಥಸ್ವಾಮಿ ಹಾಗೂ ಬಳಗೆರೆ ಗ್ರಾಮದ ಎಲ್ಲಾ ಭಕ್ತಾದಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.