ತಾತಯ್ಯರ ಸಂದೇಶ ಸಮಾಜಕ್ಕೆ ಅವಶ್ಯಕ

ವಿಜಯಪುರ.ಮಾ೨೭:ಕೈವಾರ ತಾತಯ್ಯ ಅವರು ಸಮಾಜದಲ್ಲಿ ಬೇರೂರಿದ್ದ ಹಲವು ಮೂಢನಂಬಿಕೆ ಅನಿಷ್ಟ ಪದ್ದತಿಗಳ ವಿರುದ್ದ ಹೋರಾಟ ಮಾಡಿದ್ದರು. ಅವರ ಸಂದೇಶ, ತತ್ವಗಳು ಸಮಾಜಕ್ಕೆ ಅತ್ಯಂತ ಅವಶ್ಯಕ ಎಂದು ಬಲಿಜ ಜನಾಂಗದ ಮುಖಂಡ ವಿ.ಎನ್.ವೆಂಕಟೇಶ್ ತಿಳಿಸಿದರು.
ಇಂದು ಪಟ್ಟಣದ ಪುರಸಭಾ ಆವರಣದಲ್ಲಿ ಪುರಸಭಾ ಹಾಗೂ ಬಲಿಜ ಕುಲಬಂಧುಗಳಿಂದ ಆಯೋಜಿಸಿದ್ದ ಯೋಗಿನಾರೇಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾತಯ್ಯನವರು ಕೈವಾರದ ಯೋಗಿನಾರೇಯಣ ತಾತಯ್ಯನವರು ನಮ್ಮ ವಿಜಯಪುರದ ಇತಿಹಾಸ ಪ್ರಸಿದ್ದ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಸುಮಾರು ಐದಕ್ಕೂ ಹೆಚ್ಚು ಕೀರ್ತನೆಗಳನ್ನು ರಚನೆ ಮಾಡಿರುವುದು ನಮ್ಮೆಲ್ಲರ ಸೌಭಾಗ್ಯ ಅಂದು ತಾತಯ್ಯನವರು ವಿಜಯಪುರದಲ್ಲಿ ಸುಮಾರು ಮೂರ್ ನಾಲ್ಕು ದಿನ ಬಂದು ಉಳಿದಿದ್ದರೂ ಎಂಬ ಇತಿಹಾಸವು ಉಂಟು, ಮಾನವ ಜನ್ಮವು ಗುರುಗಳ ಸೇವೆಯನ್ನು ಯಾರು ಪಾಲಿಸುತ್ತಾನೆ ಅವನು ಪರಮ್ಮತನ್ನು ಸೇರಿದಂತೆ ಎಂದು ಕೈವಾರ ಕ್ಷೇತ್ರದ ಧರ್ಮಧಿಕಾರಿ ಜಯರಾಮ್ ಗುರುಗಳು ತಿಳಿಸಿದ್ದಾರೆ ಎಂದರು.
ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದ ಕೈವಾರ ತಾತಯ್ಯ ಅವರು ಅಂದಿನ ಕಾಲದಲ್ಲೇ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದವರು. ಅವರ ತತ್ವ ಪದಗಳಿಂದ ಮಾನವ ಕುಲಕ್ಕೆ ಮಾದರಿ ಎಂದರು.
ಬಲಿಜ ಜನಾಂಗದ ಅಧ್ಯಕ್ಷ ಮುನಿರಾಜ್ ಮಾತನಾಡಿ, ಪ್ರತಿ ವರ್ಷವು ಯೋಗಿನಾರಾಯಣ ತಾತಯ್ಯನವರ ಜಯಂತಿಯನ್ನು ನಮ್ಮ ಕುಲ ಬಂಧುಗಳು ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಸುತ್ತಿದ್ದರು ಈ ವರ್ಷವೂ ನೀತಿ ಸಮಿತಿ ಇದ್ದ ಕಾರಣ ತಾತಯ್ಯನವರ ಜಯಂತಿಯನ್ನು ಸರಳವಾಗಿ ಮಾಡುತ್ತಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಪಟ್ಟಣದ ಬಲಿಜ ಜನಾಂಗದ ಕುಲ ಬಂಧುಗಳು ಶ್ರೀ ಯೋಗಿನಾರಾಯಣ ತಾತಯ್ಯನವರ ಪಲ್ಲಕ್ಕಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಾತಯ್ಯನವರ ಕೀರ್ತನೆಗಳನ್ನು ಜಪಿಸುವ ಮೂಲಕ ಮೆರವಣಿಗೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಸಂತೋಷ್ ಕುಮಾರ್, ಪುರಸಭಾ ಅಧಿಕಾರಿಗಳಾದ ತ್ಯಾಗರಾಜ್, ಲಾವಣ್ಯ, ಮಾಜಿ ಪುರಸಭಾ ಸದಸ್ಯ ಬಲಮುರಿ ಶ್ರೀನಿವಾಸ್, ಗೋವಿಂದರಾಜ್, ಹರೀಶ್, ಮುನಿರಾಜ್, ರಮೇಶ್, ಶಂಕರಪ್ಪ, ಚಂದ್ರು, ನಾಗಯ್ಯ, ಮಹಾತ್ಮ ಆಂಜನೇಯ್ಯ ಹಾಗೂ ಬಲಿಜ ಜನಾಂಗದ ಎಲ್ಲಾ ಕುಲಬಂಧುಗಳು, ಬಜನಮಂಡಳಿಯ ಎಲ್ಲಾ ಭಕ್ತವೃಂದ ಹಾಜರಿದ್ದರು.