ತಾಜುದ್ದೀನ್ ಆಜಾದ್‍ಗೆ ಸನ್ಮಾನ

ಕಲಬುರಗಿ,ಮೇ.27-ವಿಧಾನಸಭಾ ಚುನಾವಣೆ ಅವಧಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ನಡೆಸಿದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ‘ಪ್ರಜಾವಾಣಿ’ಯ ಕಲಬುರಗಿ ಬ್ಯೂರೊ ಹಿರಿಯ ಛಾಯಾಗ್ರಾಹಕ ತಾಜುದ್ದೀನ್ ಆಜಾದ್ ಅವರಿಗೆ ಕಲಬುರಗಿ ಜಿಲ್ಲಾ ಫೆÇೀಟೋಗ್ರಾಫರ್ಸ ಅಸೋಸಿಯೇಷನ್ ವತಿಯಿಂದ ಅಸೊಶಿಯೇಶನ್ ಅಧ್ಯಕ್ಷÀ ಬಸವರಾಜ ಸಿ.ತೋಟದ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಗಂಗಾರಾಮ ರಾಠೊಡ, ರಮೇಶ್ ಲಾಲಬುಂದ್ರೆ, ಪ್ರಕಾಶ ಎಂ.ಶೆರಖಾನೆ, ಅನೀಲಕುಮಾರ ಗಣೇಶಕರ್, ರಮೇಶ್ ಸ್ವಾಮಿ, ಶರಣು ಡೊಣ್ಣುರ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಬಿ.ಎಮ್.ರಾವುರ ಅವರು ಉಪಸ್ಥಿತಿರಿದ್ದರು.