ತಾಂದಳೆ ಅಗಲಿಕೆ ಮಾಧ್ಯಮ ಲೋಕಕ್ಕೆ ಬಹು ನಷ್ಟ: ಸೋನಾರೆ

ಬೀದರ:ಮೇ.4: ಜಿಲ್ಲೆಯ ಹಿರಿಯ ಪ್ರೆಸ್ ಫೆÇೀಟೋಗ್ರಾಫರ್ ಆದ ಮಾರೂತಿರಾವ್ ತಾಂದಳೆಯವರು ಕರೋನಾ ಸೋಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಉಸಿರು ನಿಲ್ಲಿಸಿ ಬಿಟ್ಟರು. ಇದು ಬೀದರಿನ ಮಾಧ್ಯಮ ಹಾಗೂ ಸಾಂಸ್ಕøತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಹೇಳಿದರು.

ಜನಪದ ಕಲಾವಿದರ ಬಳಗ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ ಮಾರೂತಿರಾವ್ ತಾಂದಳೆಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಮಾರುತಿರಾವ್ ತಾಂದಳೆ (ಮಾಮಾ) ಅವರು ಬೀದರಿನ ಬಹುದೊಡ್ಡ ಆಸ್ತಿ, ಅವರಿಗೆ ಸ್ವಲ್ಪವೂ ಕೂಡ ಹಮ್ಮು ಬಿಮ್ಮು ಇರಲಿಲ್ಲ. ಅದೆಷ್ಟೋ ಸಲ ನಮಗೆ ಬುದ್ದಿ ಹೇಳಿದ್ದಿದೆ. ಬೀದರಿನಲ್ಲಿ ಯಾವುದೇ ಕಾರ್ಯಕ್ರಮವಿರಲಿ ಸರಿಯಾದ ಸಮಯಕ್ಕೆ ಬಂದು ಫೆÇೀಟೋ ತೆಗೆಯುತ್ತಿದ್ದರು. ಒಬ್ಬ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡೇವು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಿ.ಜೆ ಪಾರ್ವತಿ ವಿ ಸೋನಾರೆ ಮಾತನಾಡಿ, ತಾಂದಳೆಯವರು ಫೆÇೀಟೋ ಗ್ರಾಫಿಗೆ ಗೌರವ ತಂದುಕೊಟ್ಟಂತವರು. ಸಮಯ ಪ್ರಜ್ಞೆ ಮತ್ತು ಮಾಡುವ ಕೆಲಸದಲ್ಲಿ ಶ್ರದ್ಧೆ ಇರುವಂತ ವ್ಯಕ್ತಿ. ಅವರ ಸರಳ ಜೀವನ ಇಂದಿನ ಮಕ್ಕಳಿಗೆ ಆದರ್ಶವಾಗುತ್ತದೆ. ಕರೋನಾ ಸೋಂಕಿತರಾಗುವ ತನಕ ಅವರು ಕೈಯಲ್ಲಿ ಕ್ಯಾಮರಾ ಹಿಡಿದಕೊಂಡೇ ಇದ್ದರು ಅವರ ನಿಧನದಿಂದ ತುಂ¨ ಬೇಸರವಾಗಿದೆ. ಅವರ ಮನೆಯವರಿಗೆಲ್ಲ ಈ ದುಃಖ ತಡೆದುಕೊಳ್ಳುವ ಶಕ್ತಿ ಬರಲಿ ಎಂದರು.

ಈ ಸಂದರ್ಭದಲ್ಲಿ ಭಾರತಿ ಡಬಳಾಪೂರ್, ನಿಶಿಗಂಧ ಡಪಳಾಪೂರ, ಕು.ಅಶ್ಮೀತಾ, ಕು.ವೈಶ್ಣವಿ ಸೇರಿದಂತೆ ಇತರರು ಇದ್ದರು.