ತಾಂತ್ರಿಕ ಸಮ್ಮೇಳನ

ಕಲಬುರಗಿ:ನ.5: ನಗರದ ಖಾಸಗಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ,ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷರ ಸಂಘದ ಜಿಲ್ಲಾ ಘಟಕದ ಇವರ ಸಂಯುಕ್ತ ಆಶ್ರಯದಲ್ಲಿ ಜಾನುವಾರುಗಳಲ್ಲಿ ಅನುತ್ಪಾದಕ ಸಮಸ್ಯೆ ಮತ್ತು ಅದರ ಪರಿಹಾರ ಎಂಬ ವಿಷಯದ ಬಗ್ಗೆ ಪಶುವೈದ್ಯಕೀಯ ಪರಿಕ್ಷಕರ ವೃಂದದವರಿಗೆ ಒಂದು ದಿನದ ತಾಂತ್ರಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.
ಸಮ್ಮೇಳನಕ್ಕೆ ಗಣ್ಯರಿಂದ ದೀಪ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ಸಮ್ಮೇಳನದಲ್ಲಿ ಉಪ ನಿರ್ದೇಶಕ ಸೀರಾಜುದ್ದಿನ್ ಅವಟಿ, ಸಂಘದ ಅಧ್ಯಕ್ಷೆ ಸುಜಾತಾ ಗೌತಮ ಕಾಂಬಳೆ, ಗೌರವ ಅಧ್ಯಕ್ಷ ಮೌನೇಶ ದೋಡಮನಿ, ಡಾ.ಸುಭಾಷ್ ಟಕಳಕಿ, ಡಾ.ಎಂ.ಬಿ.ಶ್ರೀಧರ ಭಟ್ಟ, ರಮೇಶ ಜಾಧವ, ನಾಗಪ್ಪ ನಿಪ್ಪಾಣಿ, ಶಾಂತಕುಮಾರ ಹೀರೆಮಠ, ಡಾ. ಅಸಂಗಿಹಾಳ, ಡಾ.ಧನರಾಜ, ಅಶೋಕ ಹರಸೂರ, ಬಸಲಿಂಗಪ್ಪ ಖಾನಾಪೂರ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.