ತಾಂತ್ರಿಕ ಶಿಕ್ಷಣ ಎಲ್ಲರಿಗೂ ತಲುಪಲಿ-ಉಪಾದ್ಯಾಯ

ಧಾರವಾಡ ನ.06-ತಾಂತ್ರಿಕ ಶಿಕ್ಷಣ ಕೇವಲ ಹಣ ಉಳ್ಳವರಿಗೆ ಮಾತ್ರವಲ್ಲ ಸಮಾಜದ ಕೆಳಸ್ತರದಲ್ಲಿರುವ, ಆರ್ಥಿಕವಾಗಿ ಹಿಂದುಳಿದವರಿಗೂ ತಲುಪಲಿ ಎಂಬ ಸದುದ್ದೇಶದಿಂದ ಧಾರವಾಡದ ವಿದ್ಯಾಗಿರಿಯಲ್ಲಿರುವ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಟಾಟಾ ಮೋಟಾರ್ಸ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಜೆ.ಎಸ್.ಎಸ್. ಐಟಿಐ ಮಹಾವೀರ ಉಪಾಧ್ಯೆ ಹೇಳಿದರು.
“ಲೀಪ್” ಎಂಬ ಕೋರ್ಸಿಗೆ ಕನಿಷ್ಠ ಎಸ್.ಎಸ್.ಎಲ್,ಸಿ ಪಾಸಾದ 35 ವರ್ಷದೊಳಗಿನ ಯುವಕರು ಪ್ರವೇಶ ಪಡೆಯಬಹುದು 3 ತಿಂಗಳು ಜೆ.ಎಸ್.ಎಸ್ ಐ.ಟಿ.ಐ ನಲ್ಲಿ ತಾತ್ವಿಕ ತರಬೇತಿ ನೀಡಲಾಗುವುದು ನಂತರ 9 ತಿಂಗಳು ಟಾಟಾ ಅಧಿಕೃತ ಡೀಲರ್ ಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುವುದು.
ಪ್ರಾಯೋಗಿಕ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳಿಗೆ ರೂ. 3000/- ಶಿಷ್ಯವೇತನ ನೀಡಲಾಗುವುದು ಎಂದು ಟಾಟಾ ಮೋಟಾರ್ಸ್ ಆವರಣದಲ್ಲಿ ನಡೆದ ಕೋರ್ಸಿನ ಒಪ್ಪಂದಕ್ಕೆ ಸಹಿ ಮಾಡುವ ಕಾರ್ಯಕ್ರಮದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಟಾಟಾ ಮೋಟರ್ಸ್ ನ ಮಾನವ ಸಂಪನ್ಮೂಲ ಅಧಿಕಾರಿ ವೇಲು ವೆಂಕಟೇಶ್ ಮಾತನಾಡಿ ಟಾಟಾ ಮೋಟರ್ಸ್ ಹಲವಾರು ಸಂಘ ಸಂಸ್ಥೆ, ಕಾಲೇಜುಗಳ ಜೊತೆ ಈ ರೀತಿ ಒಪ್ಪಂದಗಳನ್ನು ಮಾಡಿಕೊಂಡು ಯುವಕರಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಟಾಟಾ ಮೋಟರ್ಸ್ ನ ರಾಜಶೇಖರ್ ಬೆಲ್ಲದ್, ಆಶಾ ಶಿಂಧೆ, ಜೆ.ಎಸ್.ಎಸ್ ನ ಬಿ.ಎ.ತಡಕೋಡ ಮಹೇಶ ಕುಂದರಪಿಮಠ, ಮಂಜುನಾಥ್ ಚೆಟ್ಟೇರ್ ಉಪಸ್ಥಿತರಿದ್ದರು