ತಾಂತ್ರಿಕ ದೋಷ ಒಂದು ಗಂಟೆ ತಡವಾಗಿ ಚಲಿಸಿದ ಹಂಪಿ ಎಕ್ಸ್ ಪ್ರೆಸ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು,19- ಹಂಪಿ ಎಕ್ಸ್‌ಪ್ರೆಸ್‌ ರೈಲಿನ  ಭೋಗಿಯೊಂದರ ಚಕ್ರದಲ್ಲಿ ತಾಂತ್ರಿಕ ದೋಷದಿಂದ ಕಾಣಿಸಿಕೊಂಡ  ಬೆಂಕಿ‌ಯಿಂದ ನಿನ್ನೆ ರಾತ್ರಿ ರೈಲು ಒಂದು ಗಂಟೆ ತಡವಾಗಿ ಚಲಿಸಿದೆ.
ಜಿಲ್ಲೆಯ ತೋರಣಗಲ್ಲು ರೈಲು‌ನಿಲ್ದಾಣಕ್ಕೆ ಹುಬ್ಬಳ್ಳಿಯಿಂದ ಬಂದು ನಂತರ ಬೆಂಗಳೂರಿನತ್ತ  ಹೊರಡುವಾಗ ರೈಲ್ವೇ ಇಂಜಿನ್ ಹಿಂದಿನ ಭೋಗಿಯ ಚಕ್ರವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಇದನ್ನು ಗಮನಿಸಿದ ಲೋಕೋ ಪೈಲಟ್ ಗಳು ಮಾಹಿತಿ ನೀಡಿ ರೈಲು ಚಲಿಸದಂತೆ ತಡೆಹಿಡಿದು ಚೆಕ್ ಮಾಡಿದ್ದಾರೆ.
ರೈಲು ಮುಂದೆ ಸಾಗುತ್ತಿದ್ದಂತೆ  ಹಿಂದಿನ ಬೋಗಿಯ ಗಾಲಿಯಲ್ಲಿ ಬೆಂಕಿ ಬರುತ್ತಿತ್ತು.‌ ಸಂಬಂಧಿಸಿದ ತಾಂತ್ರಿಕ ಸಿಬ್ಬಂದಿ‌ ಬಂದು  ಸರಿಪಡಿಸಲು ಒಂದು‌ತಾಸು ಬೇಕಾಯಿತು.
ನಂತರ ರೈಲು ಬೆಂಗಳೂರಿನತ್ತ ತೆರಳಿದೆ.