ತಾಂತ್ರಿಕ ದೋಷದಿಂದ ತರಬೇತಿ ವಿಮಾನ ತುರ್ತು ಭೂಸ್ಪರ್ಶ

ಚಿತ್ತಾಪುರ:ಜೂ.26:ತಾಲೂಕಿನ ಪೇಠಶಿರೂರ್ ಗ್ರಾಮದ ಹೊರವಲಯದಲ್ಲಿ ರವಿವಾರ ತಾಂತ್ರಿಕ ದೋಷದಿಂದ ತರಬೇತಿ ವಿಮಾನವು ತುರ್ತು ಭೂಸ್ಪರ್ಶ ಮಾಡಿದೆ.

ಮುತ್ತಗಾ ಮತ್ತು ಪೇಠಶಿರೂರ್ ಗ್ರಾಮಗಳ ಮಧ್ಯದಲ್ಲಿ ಈ ಘಟನೆ ನಡೆದಿದೆ.ತರಬೇತಿ ವಿಮಾನದಲ್ಲಿ ನಾಲ್ಕು ಜನ ಇದ್ದಿದ್ದು ಪೈಲಟ್‍ನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಇಬ್ಬರಿಗೆ ಮಾತ್ರ ಚಿಕ್ಕಪುಟ್ಟ ಗಾಯಗಳಾಗಿದ್ದು ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಕಲಬುರಗಿ ಜಿಲ್ಲೆಯ ಸರಡಗಿ ಗ್ರಾಮದ ಬಳಿ ಇರುವ ವಿಮಾನ ನಿಲ್ದಾಣ ಮತ್ತು ತರಬೇತಿ ಕೇಂದ್ರದಲ್ಲಿ ತರಬೇತಿ ವಿಮಾನಗಳು ಹಾರಾಡುತ್ತಿವೆ. ತರಬೇತಿ ವಾಹನ ಎಂದಿನಂತೆ ಹಾರಾಡುತ್ತಿರುವಾಗ ಆಕಸ್ಮಿಕವಾಗಿ ವಿಮಾನದಲ್ಲಿ ತಾಂತ್ರಿಕ ದೇಷ ಕಂಡು ಬಂದಿದ್ದು ಫೈಲಟ್ ಸಮಯಪ್ರಜ್ಞೆಯಿಂದ ಸುರಕ್ಷಿತವಾಗಿ ಮುತ್ತಾಗಾ ಗ್ರಾಮದಲ್ಲಿ ಬಳಿ, ವಿಮಾನವನ್ನು ತುರ್ತು ಭೂಸ್ಪರ್ಷವಾಗಿದ್ದು, ತರಬೇತಿದಾರರು ಪ್ರಾಣಪಾಯದಿಂದ ಪಾರುಯಾಗಿದ್ದಾರೆ.