ತಾಂಡ ಫಲಾನುಭವಿಗಳಿಗೆ ಸಲಕರಣೆ ವಿತರಣೆ


ಸಂಜೆವಾಣಿ ವಾರ್ತೆ
ಕುಕನೂರು, ಫೆ.20: ಪಟ್ಟಣದ ಸಚಿವರ ಕಾರ್ಯಾಲಯದಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಲ್ಲಿ ಮಂಜೂರಾದ ಬೋರವೆಲ್ ಫಲಾನುಭವಿಗಳಿಗೆ ಸಲಕರಣೆಗಳನ್ನು ಭಾನುವಾರ ವಿತರಿಸಲಾಯಿತು .ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರೀಕರ ಮತ್ತು ಅಂಗವಿಕಲರ ಸಬಲೀಕರಣ ಇಲಾಖೆ ಸಚಿವ  ಹಾಲಪ್ಲ್ಮ ಆಚಾರರು, ಸರಕಾರದಿಂದ ದೊರೆತ ಈ ಸೌಲಭ್ಯವನ್ನು ಸರಿಯಾಗಿ ಬಳಸಿಕೊಂಡು ರೈತರು ಅಭಿವೃದ್ಧಿ ಹೊಂದಬೇಕು,ಹಾಗೂ ಸರಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ರೈತರಿಗೆ ,ಬಡವರಿಗೆ ನ್ಯಾಯಯುತವಾಗಿ ಸಿಗಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಂಡಾ ಅಭಿವೃದ್ಧಿ ನಿಗಮದ ಕೊಪ್ಪಳ ವಲಯದ ವ್ಯವಸ್ಥಾಪಕರಾದ ಶ್ರೀ ಗಣೇಶ ನಾಯಕ, ಇಂಜನಿಯರ್ ರಾಘವೇಂದ್ರ ,ಮುಖಂಡರಾದ ಸುರೇಶ ಬಳೂಟಗಿ,ಶೀನಪ್ಪ ಚವ್ಹಾಣ, ವೆಂಕಟೇಶ ನಾಯಕ,ವೆಂಕಟೇಶ ಕಾರಭಾರಿ, ಕುಮಾರ ಬಳಗೇರಿ,ವಿಶ್ವನಾಥ ಕುಣಿಕೇರಿ, ಶಿವಮೂರ್ತಿ ರಾಠೋಡ, ಇನ್ನಿತರರು ಉಪಸ್ಥಿತರಿದ್ದರು.