ತಾಂಡಾ ನಿಗಮ ಅಧ್ಯಕ್ಷ ಪಿ. ರಾಜೀವ್ ಕುಡಚಿಜೊತೆ ಬಾನುಲಿ ಸಂದರ್ಶನ

ಕಲಬುರಗಿ:ನ.11: ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿನಿಗಮದ ಅಧ್ಯಕ್ಷರಾದ ಪಿ.ರಾಜೀವ್ ಕುಡಚಿ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನವನ್ನು ಆಕಾಶವಾಣಿ ಕಲಬುರಗಿ ಕೇಂದ್ರವು ಶನಿವಾರ (– 12 ರಂದು) ಬೆಳಿಗ್ಗೆ 9.30ಕ್ಕೆ ಬಿತ್ತರಿಸಲಿದೆ.

ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಕೆಲಸಕಾರ್ಯಗಳು ಮತ್ತು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಹಕ್ಕು ಪತ್ರ ಹಸ್ತಾಂತರಿಸುವ ಐತಿಹಾಸಿಕ ಕಾರ್ಯಕ್ರಮದ ಕುರಿತಾಗಿ ಡಾ.ಸದಾನಂದ ಪೆರ್ಲ ಅವರು ನಡೆಸಿದ ಸಂದರ್ಶದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರಾಜೀವ್ ಅವರಿಗೆ ನಿಲಯದ ಮುಖ್ಯಸ್ಥರಾದ ಜಿ.ಗುರುಮೂರ್ತಿ ಮತ್ತು ಕಾರ್ಯಕ್ರಮ ಸಂಯೋಜಕರಾದ ಅನಿಲ್ ಕುಮಾರ್ ಎಚ್.ಎನ್. ಶಾಲು ಮತ್ತು ಕೃತಿ ನೀಡಿ ಸ್ವಾಗತಿಸಿದರು.