ತಾಂಡಾ ಅಭಿವೃದ್ಧಿ ನಿಗಮದ ರಾಜೀವ್ ಕುಡಚಿ ಅವರೊಡನೆ ಆಕಾಶವಾಣಿ ಸಂವಾದ

ಕಲಬುರಗಿ:ಜ.17: ಆಕಾಶವಾಣಿಯ ನೇರ ಫೋನ್ ಇನ್ ಸಂವಾದದಲ್ಲಿ ಬುಧವಾರ ಜನವರಿ 18ರಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಪಿ. ರಾಜೀವ ಕುಡಚಿ ಭಾಗವಹಿಸಲಿದ್ದಾರೆ. ಬುಧವಾರ ಬೆಳಗ್ಗೆ 10 . 30 ನಿಮಿಷದಿಂದ 11:30 ನಿಮಿಷದವರೆಗೆ ತಾಂಡಾ ಗಳಿಗೆ ಸನ್ಮಾನ್ಯ ಪ್ರಧಾನ ಮಂತ್ರಿಯವರಿಂದ ಹಕ್ಕು ಪತ್ರ ವಿತರಣೆ ಈ ವಿಷಯದ ಕುರಿತಾಗಿ ನೇರ ಫೋನ್ ಇನ್ ಸಂವಾದ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗಳಿಗೆ ಅವರು ಉತ್ತರಿಸಲಿದ್ದಾರೆ.

         ಸೇಡಂ ತಾಲೂಕಿನ ಮಳಖೇಡದಲ್ಲಿ ಜನವರಿ 19ರಂದು ನಡೆಯುವ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳು ಐತಿಹಾಸಿಕ ಕಾರ್ಯಕ್ರಮದಲ್ಲಿ  ಲಂಬಾಣಿ, ಬಂಜಾರ ಸಮುದಾಯದ ಜನರು ತಾಂಡಾ , ಹಾಡಿ, ಗೊಲ್ಲರ ಹಟ್ಟಿಗಳಲ್ಲಿ ವಾಸಿಸುವ 58ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮದ ರೂಪು ರೇಷೆ ಹಾಗು ಮಹತ್ವದ ಕಾರ್ಯಕ್ರಮದ ಬಗ್ಗೆ ಕೇಳುಗರು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ಜೊತೆ ಸಂವಾದ ನಡೆಸಬಹುದು. ಕೇಳುಗರು ಕರೆ ಮಾಡಲು ಆಕಾಶವಾಣಿಯ 29 5 9 8 6. / 2 9 5 9 8 7 ಎಸ್ ಟಿ ಡಿ ಸಂಖ್ಯೆ08472 ದೂರವಾಣಿಯನ್ನು ಸಂಪರ್ಕಿಸಬಹದು.
     ಕಾರ್ಯಕ್ರಮವನ್ನು ಡಾಕ್ಟರ್ ಸದಾನಂದ ಪೆರ್ಲ ಅವರು ನಡೆಸಿಕೊಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಲು ಕೋರಲಾಗಿದೆ.