ತಾಂಡಾ ಅಭಿವೃದ್ಧಿ ನಿಗಮದಿಂದ ಆಳಂದ ಮತಕ್ಷೇತ್ರಕ್ಕೆದ 3.50 ಕೋಟಿ ಮಂಜೂರಾದ ಅನುದಾನ ದುರ್ಬಳಕೆ

ಆಳಂದ:ನ.19:ತಾಂಡಾ ಅಭಿವೃದ್ಧಿ ನಿಗಮದಿಂದ ಆಳಂದ ಮತ ಕ್ಷೇತ್ರಕ್ಕೆ ಮಂಜೂರಾದ ಅನುದಾನ ದುರ್ಬಳಕೆ ಮಾಡಿಕೊಂಡು ಭಾರೀ ಅವ್ಯವಹಾರ ನಡೆದಿದ್ದು, ಕಾಮಗಾರಿ ಮಾಡದೇ ಭೋಗಸ ಬಿಲ್ಲು ಸೃಷ್ಟಿ ಹಣ ದುರ್ಬಳಕೆ ಮಾಡಿ ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕೆಂದು ಶಾಸಕ ಸುಭಾಷ ಆರ್. ಗುತ್ತೇದಾರ ಅವರು ಆಗ್ರಹಿಸಿದ್ದಾರೆ.

ಬುಧವಾರ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ತಾಂಡಾ ಅಭಿವೃದ್ಧಿ ನಿಗಮದಿಂದ ನಮ್ಮ ಮತ ಕ್ಷೇತ್ರಕ್ಕೆ ಮಂಜೂರು ಆದ ಅನುದಾನ ಸುಮಾರು 3.50 ಕೋಟಿ ರೂ. ಗಳ ಕಾಮಗಾರಿ ನಿರ್ಮಿಸದೇ ಭೋಗಸ ಬಿಲ್ಲ ಸೃಷ್ಠಿಸಿ ಅನುದಾನ ಎತ್ತಿ ಹಾಕಿದ್ದಾರೆ.

ಕರ್ನಾಟ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ ನಿಯಮಿತ ಕಲಬುರಗಿ ಉಪ ವಿಭಾಗ -2 ಮತ್ತು ಅಫಜಲಪೂರ ಉಪ ವಿಭಾಗದ ಅಧಿಕಾರಿಗಳು ಪರಶಿಷ್ಯ ಜಾತಿ ಜನರಿಗೆ ಒದಗಿಸಬೇಕಾದ ರಸ್ತೆ, ಮೂಲಭೂತ ಸೌಕರ್ಯ ಕಾಮಗಾರಿಗಳು ಮಾಡದೇ ಸುಳ್ಳು ದಾಖಲೆ ಸೃಷ್ಠಿಸಿ ಸರಕಾರದ ಹಣ ಲೂಟಿ ಮಾಡಿದ್ದಾರೆ. ಲಾಡಚಿಂಚೋಳಿ ತಾಂಡಾ 48.78 ಲಕ್ಷ, ಲಾಡ ಚಿಂಚೋಳಿ ಗ್ರಾಮ ತಾಂಡಾ 47.30 ಲಕ್ಷ , ಧುತ್ತರಗಾಂವ ತಾಂಡಾ 96.56 ಲಕ್ಷ, ನಿಂಬಗಾ ತಾಂಡಾ 24 ಲಕ್ಷ , ಲಾಡ ಚಿಂಚೋಳಿ ಧುತ್ತರಗಾಂವ ತಾಂಡಾ 27.84 ಲಕ್ಷ, ದರಿ ತಾಂಡಾ 27.84 ಲಕ್ಷ, ದಣ್ಣೂರ ತಾಂಡಾದ 26.88 ಲಕ್ಷ, ನಿಂಬಗಾ ತಾಂಡಾ 15.36, ಲಾಡ ಚಿಂಚೋಳಿ ಸರಕಾರಿ ಶಾಲೆ 11.52 ಲಕ್ಷ, ಕೋರಳ್ಳಿ ಕಿತ್ತೂರು ರಾಣಿ ಚೆನಮ್ಮ ವಸತಿ ಶಾಲೆಗೆ ಕ್ರೀಡಾ ಅಂಕಣಗಳನ್ನು ನಿರ್ಮಿಸುವ ಕಾಮಗಾರಿ 2018-19ರ 7.94 ಲಕ್ಷ ರೂ. ವಿವಿಧ ಕಾಮಗಾರಿಗಳನ್ನು ಮಾಡದೇ ಅಧಿಕಾರಿಗಳು ಹಣ ದುರ್ಬಳಕೆ ಮಾಡಿಕೊಂಡಿದ್ದು. ಸರಕಾರಕ್ಕೆ ಮೋಸ ಮಾಡಿದ್ದಾರೆ.

ಪರಶಿಷ್ಯ ಜಾತಿ ಜನರಿಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಿ ಅವರನ್ನು ಮುಖ್ಯ ವಾಹಿನಿ ತರಲು ಸರಕಾರ ಹರಸಾಹಸ ಪಟ್ಟು ಅನುದಾನ ಒದಗಿಸಿದರು ಕೂಡಾ . ಇಂತಹ ಭ್ರಷ್ಟ ಕೆಆರ್‍ಐಡಿಎಲ್ ಕಲಬುರಗಿ ವಿಭಾಗದ ಅಧಿಕಾರಿಗಳಾದ ಎಸ್.ಎಂ.ನಾಯಕ, ಎಸ್.ಬಿ.ನಾಗೂರ, ಶೇಖ ಸಲ್ಲೀಮುದ್ದಿನ, ರಾಜಶೇಖರ ಬಿ ಇವರ ವಿರುದ್ಧ ಪ್ರಕರಣ ದಾಖಲಿಸಿ ದುರ್ಬಳಕ್ಕೆ ಮಾಡಿಕೊಂಡ ಅನುದಾನವನ್ನು ಮರಳಿ ಸರಕಾರ ಸಂದಾಯ ಮಾಡಿಕೊಂಡಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಎಸ್.ಎಂ.ನಾಯಕ್ ಎಇ ಮತ್ತು ಎಇಇ ಉಪ ವಿಭಾಗ ಅಫಜಲಪೂರ, ಎಸ್.ಬಿ.ನಾಗೂರ ಇಇ ಕಲಬುರಗಿ ಉಪ ವಿಭಾಗ -2 ಇವರು ಒಂದೇ ಅಂದರೆ 31-07-2021 ರಂದು ನಿವೃತ್ತಿ ಯಾಗಿರುತ್ತಾರೆ. ಈ ಸಂದರ್ಭದಲ್ಲಿ ಶೇಖ ಸಲ್ಲೀಮುದ್ದಿನ ಅವರು ಎಸ್.ಇ ಇವರ ಮೇಲಾಧಿಕಾರಿಗಳು ಆಗಿರುತ್ತಾರೆ. ಕಾರ್ಯಪಾಲಕ ಅಭಿಯಂತರರು ಕೆಆರ್‍ಐಡಿಎಲ್ ವಿಭಾಗ ಕಲಬುರಗಿ ಎಂದು ಕರ್ತವ್ಯದಲ್ಲಿ ಇರುತ್ತಾರೆ. ಈ ಎಲ್ಲಾ ಅಧಿಕಾರಿಗಳು ಸೇರಿ ಕೊಂಡು ತಾಂಡಾ ಜನರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ನುಂಗಿ ಹಾಕಿದ್ದಾರೆ. ಕೂಡಲೇ ಇವರ ವಿರುದ್ದ ಕ್ರಮ ಜರುಗಿಸಬೇಕೆಂದು ಕಟುವಾಗಿ ಆಗ್ರಹಿಸಿದ್ದಾರೆ.