ತಾಂಡಾಗಳಿಗೆ ಕಂದಾಯ ಗ್ರಾಮದ ಭಾಗ್ಯ

ಕಲಬುರಗಿ,ಜ.18-ಕಳೆದ 72 ವಷ9ಗಳಿಂದ ಸ್ವಂತ ಸೂರಿಲ್ಲದೆ, ನಿರಂತರವಾಗಿ ತುಳಿತಕ್ಕೆ ಒಳಗಾಗಿರುವ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ನೀಡುವ ಮೂಲಕ ರಾಜ್ಯ ಸರ್ಕಾರ ಹೊಸ ಜೀವನ ಕಲ್ಪಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಮಂಗಳವಾರ ಕಲಬುರಗಿ ತಾಲೂಕಿನ ಮಾಚನಾಳ ತಾಂಡದಲ್ಲಿ ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನನ್ನ 14ನೇ ಗ್ರಾಮ ವಾಸ್ತವ್ಯ ಮಾಚನಾಳ ತಾಂಡಾದಲ್ಲಿ ಆಗುತ್ತಿದೆ. ಒಂದು ರಾತ್ರಿ ಇದೇ ಗ್ರಾಮದಲ್ಲಿ ಇರಲಿದ್ದೇನೆ. ನನ್ನ ಜೊತೆ ಮಾತಾಡಬಹುದು, ಊಟ ಮಾಡಬಹುದು ಎಂದು ಹೇಳಿದರು.
ಬಂಜಾರ ಧರ್ಮ ಗುರುಗಳಾದ ಸಂತ ಸೇವಾಲಾಲ ಅವರ ಕೊಡುಗೆ ಸಮಾಜಕ್ಕೆ ಆಗಾಧವಾಗಿದೆ. ಸಕಾ9ರದ ಯಾವುದೇ ದಾಖಲೆಯಲ್ಲಿ ತಾಂಡಾಗಳ ಬಗ್ಗೆ ವಿವರಣೆ ಇಲ್ಲ. ದಾಖಲೆಗಳಿಲ್ಲದೇ 72 ವಷ9ಗಳಿಂದ ತುಳಿತಕ್ಕೆ ಒಳಗಾಗಿದೆ. ಹೀಗಾಗಿ ತಾಂಡಾಗಳ ಜನರಿಗೆ ಏನಾದರೂ ಒಳ್ಳೆಯದು ಮಾಡಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ 3218 ಮಜರೆ, ಆಡಿ, ತಾಂಡಾ, ಸೇರಿದಂತೆ ಯಾವುÀದಕ್ಕೂ ದಾಖಲೆಯಿಲ್ಲ. ಹೀಗಾಗಿ ಈ ಗ್ರಾಮಗಳಿಗೆ ಕಂದಾಯ ಗ್ರಾಮಗಳಾಗಿ ಮಾಡುವ ಮಹತ್ವದ ಕೆಲಸವನ್ನು ನಾನು ನನ್ನ ಇಲಾಖೆ ವತಿಯಿಂದ ಮಾಡುತ್ತಿದ್ದು, ಇದನ್ನು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ಕೊಡಿಸಲು ಸಿದ್ದವಾಗಿದ್ದೇವೆ ಎಂದರು.
ರಾಜ್ಯದ 1 ಲಕ್ಷ 2 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ಗಳನ್ನು ಸಬ್ ರೆಜಿಸ್ಟರ್ ಆಫೀಸನಲ್ಲಿ ದಾಖಲೆ ಮಾಡಿ ಕೊಡುತ್ತೇವೆ ಎಂದರು.
ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಮಾತನಾಡಿ, ಕಂದಾಯ ಸಚಿವರ ಗ್ರಾಮ ವಾಸ್ತವ್ಯ ರಾಜ್ಯದಲ್ಲಿ ಇತಿಹಾಸ ಸೃಷ್ಟಿ ಮಾಡಿದೆ. ಇಡೀ ಭಾರತದಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಪತ್ರಗಳನ್ನು ನೀಡಿದ್ದಾರೆ. ಬಂಜಾರ ಸಮುದಾಯವು ಈ ನೆಲಕ್ಕೆ ತನದೇ ಆದ ಅಸ್ಮಿತೆಯನ್ನು ನೀಡಿದೆ. ಈ ಸಮುದಾಯ ಈ ನಾಡಿನ ರಾಜ ಪರಂಪರೆಯನ್ನು ಗೌರವಿಸಿದೆ ಎಂದರು.
ಕಂದಾಯ ಸಚಿವರ ಕಾಳಜಿ ಈ ಸಮಾಜದ ಮೇಲೆ ನಿರಂತರವಾಗಿ ಇರಲಿ.ಮಾಚನಾಳ ತಾಂಡಾ ಈಗಾಗಲೇ ಕಂದಾಯ ಗ್ರಾಮವಾಗಿ ಪರಿವರ್ತನೆ ಆಗಿದ್ದು,ನಾಡಿದ್ದು ಜ.19ರಂದು ಇದೇ ಸಮುದಾಯದ ಸಾವಿರಾರು ಮಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಕ್ಕು ಪತ್ರ ನೀಡಲಿದ್ದಾರೆ ಎಂದರು.
ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ಮಾಚನಾಳ ತಾಂಡಾ ಅಭಿವೃದ್ಧಿ ಸಲುವಾಗಿ ಒಂದು ಕೋಟಿ ನೀಡುವುದಾಗಿ ಸಚಿವರಾದ ಆರ್.ಅಶೋಕ್ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.
ನಾನಾ ಕಲಾ ತಂಡಗಳು ತಮ್ಮ ಕಲೆ ಪ್ರರ್ದಶಿಸಿದವು. ಮಾಚನಾಳ ಗ್ರಾಮಸ್ಥರಿಂದ ಜೆಸಿಬಿ ಮೂಲಕ ಹೂವಿನ ಸುರಿಮಳೆ ಸುರಿದರು.
ಎತ್ತಿನ ಬಂಡಿಯಲ್ಲಿ ಮೆರವಣಿಗೆ.
ಸಂಜೆ ಮಾಚನಾಳ ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ ಅವರನ್ನು ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಗ್ರಾಮದಲ್ಲಿ ಬರಮಾಡಿಕೊಳ್ಳಲಾಯಿತು.
ಇದೇ ವೇಳೆ ನೂರಾರು ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಅಧ್ಯಕ್ಷ ಅವಿನಾಶ್ ಕುಲಕರ್ಣಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿದ್ಯಾಸಾಗರ್ ಕುಲಕರ್ಣಿ, ಹಿಂದೂಳಿದ ವಗ9ಗಳ ನಾಯಕ ಕೆ.ಮುಕಡಪ್ಪಾ, ಬಂಜಾರಾ ಸಮುದಾಯದ ಮುಖಂಡರಾದ ಲತಾದೇವಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಸವರಾಜ ಬೆಣ್ಣೂರಕರ್, ಮಲ್ಲಿಕಾರ್ಜುನ ಪೂಜಾರಿ, ಮಾಳಪ್ಪಾ ಹೂವಿನಹಳ್ಳಿ, ರವಿ ಪವಾರ್, ಹಣಮಂತರಾವ್ ಬೆಂಕಿ, ಗೋವಿಂದ ಭಟ್ ಹಾವನೂರ್, ಗುರುರಾಜ್ ಕುಲಕರ್ಣಿ ತಾಲೂಕಿನ ಪಿಡಿಒ ಹಾಗೂ ತಹಶೀಲ್ದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.