ತಾಂಡಮೇಡು ಗ್ರಾಮದಲ್ಲಿ ನೀರಿನ ಹಾಹಾಕಾರ

ಹನೂರು, ನ.20: ಕುಡಿಯುವ ನೀರಿನ ಬವಣೆಯನ್ನುಅನುಭವಿಸುತ್ತಿದ್ದ ಗ್ರಾಮಸ್ಥರ ನೆರವಿಗೆ ಜನಾಶ್ರಯಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷ ಜನಧ್ವನಿ ಬಿ.ವೆಂಕಟೇಶ್ ಮುಂದಾಗಿದ್ದು, ಕೆಲಕಾಲ ಪ್ರತಿಭಟನೆಯನ್ನು ಸಹ ಕೈಗೊಂಡಿರುವುದು ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ತಾಂಡಮೇಡುಗ್ರಾಮದಲ್ಲಿ ನಡೆದಿದೆ.
ಸಾಮಾಜಿಕ ಸೇವಾಕಾರ್ಯ ನಿಮ್ಮಿತ್ತ ಮಾರ್ಟಳ್ಳಿ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಿಗೆ ತೆರಳಿದ ಸಂದರ್ಭದಲ್ಲಿತಾಂಡಮೇಡುಗ್ರಾಮಸ್ಥರು ನೀರಿನ ಹಾಹಾಕಾರದ ಸಮಸ್ಯೆಯನ್ನು ತಿಳಿಸುತ್ತಿದ್ದಂತೆ ಸ್ವತಃ ಬಿ.ವೆಂಕಟೇಶ್‍ಗ್ರಾಮಸ್ಥರಜೊತೆಗೂಡಿಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಎಚ್ಚರಿಸುವ ದಿಸೆಯಲ್ಲಿ ಪ್ರತಿಭಟನೆಯನ್ನುಕೈಗೊಂಡರು.
ಈ ವೇಳೆ ಬಿ.ವೆಂಕಟೇಶ್ ಮಾತನಾಡಿ, ತಾಂಡಮೇಡುಗ್ರಾಮದಲ್ಲಿ 6 ತೊಂಬೆ, 3 ಕೊಳವೆ ಬಾವಿ, 1 ಸೇದು ಬಾವಿ ಇದೆ. ಈ ಪೈಕಿ ದಂಡಿನ ಮಾರಮ್ಮನದೇವಾಲಯದ ಬಳಿ ಇರುವ 2 ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದ್ದು, (ಇನ್ನುಳಿದವು ಕೆಟ್ಟು ನಿಂತಿದೆ) ನೀರುತರಲುಅರ್ಧ ಕಿ.ಮಿ.ದೂರ ಕ್ರಮಿಸಿ ನೀರನ್ನುತರಬೇಕಾಗಿದೆ. ಇದರಿಂದ ಮಹಿಳೆಯರು, ಮಕ್ಕಳು, ವಯೋವೃದ್ಧರಿಗೆ ಸಮಸ್ಯೆಯಾಗಿದೆ.ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕುಎಂದು ಒತ್ತಾಯಿಸಿದರು.
ತಾಂಡಮೇಡುಗ್ರಾಮಸ್ಥರ ಪಾಲಿಗೆ ಭಗಿರಥರಾದಜನಧ್ವನಿ ಬಿ.ವೆಂಕಟೇಶ್:
ಸಾಮಾಜಿಕಕಾರ್ಯನಿಮ್ಮಿತ್ತತಾಂಡಮೇಡುಗ್ರಾಮಕ್ಕೆ ತೆರಳಿದ್ದ ಬಿ.ವೆಂಕಟೇಶ್‍ಗ್ರಾಮಸ್ಥರಿಂದ ನೀರಿನ ಸಮಸ್ಯೆಯನ್ನುಅರಿತುಪಿಡಿಒ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕೆಂದು ಪಟ್ಟು ಹಿಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪಿಡಿಒ ಶಿವಣ್ಣ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರೂತೃಪ್ತಿಯಾಗದ ಬಿ.ವೆಂಕಟೇಶ್ ಸ್ವತಃತಮ್ಮಆರ್ಥಿಕ ನೆರವಿನ ಸಹಾಯ ಹಸ್ತ ಚಾಚಿತಾತ್ಕಾಲಿಕವಾಗಿಮೂರುಟ್ಯಾಂಕರ್‍ಕುಡಿಯುವ ನೀರು ಒದಗಿಸಿರುವುದಲ್ಲದೇ ಕೆಟ್ಟು ನಿಂತಿದ್ದಬೋರ್‍ವೆಲ್‍ಗಳ ದುರಸ್ಥಿ ಕಾರ್ಯವನ್ನು ಮಾಡಿಸಿ ಗ್ರಾಮಸ್ಥರಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಿದರು. ಬಿ.ವೆಂಕಟೇಶ್ ಬೊರ್‍ವೆಲ್ ದುರಸ್ಥಿ ಕಾರ್ಯಕೈಗೊಂಡುಕುಡಿಯುವ ನೀರು ಬರುವವರೆಗೂರಾತ್ರಿಯಾದರೂಅಲ್ಲೇ ಮೊಕ್ಕಂ ಹೂಡಿಶಾಶ್ವತ ಪರಿಹಾರವನ್ನುಒದಗಿಸುವ ಮೂಲಕ ತಾಂಡಮೇಡುಗ್ರಾಮಸ್ಥರ ಪಾಲಿಗೆ ಭಗಿರಥರಾದರು.