ತಾಂಡಮೇಡು ಗ್ರಾಮಕ್ಕೆ ಶಾಸಕ ಮಂಜುನಾಥ್ ಭೇಟಿ: ಪರಿಹಾರ ವಿತರಣೆ

ಸಂಜೆವಾಣಿ ವಾರ್ತೆ
ಹನೂರು: ಆ.20:- ತಾಲೂಕಿನ ತಾಂಡಮೇಡು ಬೋರೆ ಗ್ರಾಮದಲ್ಲಿ ಆನೆ ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದ ಚಿಕ್ಕ ಮಾದಯ್ಯ ರವರ ಮನೆಗೆ ಶಾಸಕ ಎಂ.ಆರ್ ಮಂಜುನಾಥ್ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸರ್ಕಾರದಿಂದ 5 ಲಕ್ಷ ರೂ. ಚೆಕ್ ಪರಿಹಾರ ವಿತರಣೆಯನ್ನು ಮಾಡಿದರು.
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡಮೇಡು ಬೋರೆ ಗ್ರಾಮದ ನಿವಾಸಿ ಚಿಕ್ಕಮಾದಯ್ಯ ಅವರು ಕಳೆದ ನಾಲ್ಕೈದು ದಿನಗಳ ಹಿಂದೆ ಆನೆ ತುಳಿತದಿಂದ ಸಾವನ್ನಪ್ಪಿದ್ದರು.
ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಮಂಜುನಾಥ್ ಅವರು ಮೃತ ಚಿಕ್ಕ ಮಾದಯ್ಯ ಅವರ ಪತ್ನಿ ಮಾದೇವಿ ಅವರಿಗೆ ಸಾಂತ್ವಾನ ಹೇಳಿ ಸರ್ಕಾರದ 5 ಲಕ್ಷ ರೂ. ಪರಿಹಾರ ಚೆಕ್ ವಿತರಣೆ ಮಾಡಿದರು. ಹಾಗೂ ವೈಯಕ್ತಿಕವಾಗಿಯೂ ಹಾರ್ದಿಕವಾಗಿ ಸಹಾಯ ಮಾಡಿದರು.
ಇದೇ ವೇಳೆ ಶಾಸಕ ಮಂಜುನಾಥ್ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರವಾಣಿ ಕರೆ ಮಾಡಿ ಇಲ್ಲಿನ ಸಮಸ್ಯೆಗಳು ಕಾಡಂಚಿನ ಗ್ರಾಮಗಳ ಸಮಸ್ಯೆಗಳ ಬಗ್ಗೆ ತಿಳಿಸಿದರು. ಹಾಗೂ ಮೃತ ಚಿಕ್ಕಮಾದಯ್ಯ ಅವರ ಪತ್ನಿ ಮಾದೇವಿ ಅವರ ಜೊತೆಗೂ ಅರಣ್ಯ ಸಚಿವರ ಜೊತೆ ಮಾತನಾಡಿಸಿದರು.
ಈ ಸಂದರ್ಭದಲ್ಲಿ ಡಿ ಆರ್ ಎಫ್ ಶ್ರೀಧರ್, ಆರ್ ಎಫ್ ಓ ಸುಂದರ್, ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಇನ್ನಿತರರು ಹಾಜರಿದ್ದರು.