ತಹಸೀಲ ಕಚೇರಿಯ ಮನವಿಗಳನ್ನು ಪುರಸಭೆ ಕಚೇರಿಯಲ್ಲಿ ಸಲ್ಲಿಸಬೇಕು

ಭಾಲ್ಕಿ:ಎ.14: ಸಾರ್ವಜನಿಕರು ತಮ್ಮ ಯಾವುದೆ ರೀತಿಯ ಸರ್ಕಾರಕ್ಕೆ ಸಂಬಂಧಪಟ್ಟ ಮನವಿಗಳನ್ನು, ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ 2023 ರ ವೇಳಾ ಪಟ್ಟಿ ನಿಗದಿಯಾದ ನಿಮಿತ್ಯ ಸರ್ಕಾರಕ್ಕೆ ಸಂಬಂಧಪಟ್ಟ ಮನವಿಗಳನ್ನು ಏ.13 ರಿಂದ ಮೇ. 13 ರ ವರೆಗೆ ಪುರಸಭೆ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ತಹಸೀಲ್ದಾರರ ವತಿಯಿಂದ ಮನವಿ ಪಡೆಯುವ ವ್ಯವಸ್ಥೆ ಪುರಸಭೆ ಕಾರ್ಯಾಲಯದಲ್ಲಿ ಮಾಡಲಾಗಿದೆ. ಕಾರಣ ಸಾರ್ವಜನಿಕರು ತಮ್ಮ ಮನವಿಗಳನ್ನು ತಹಸೀಲ ಕಚೇರಿಯಲ್ಲಿ ಸಲ್ಲಿಸುವ ಬದಲು ಪುರಸಭೆಯಲ್ಲಿ ಸಲ್ಲಿಸಬೇಕು ಎಂದು ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.