ತಹಸೀಲ್ ಕಚೇರಿಯಲ್ಲಿ ಪೇದೆ ಆತ್ಮಹತ್ಯೆ

ಚಿತ್ತಾಪುರ,ಮೇ 4: ಚುನಾವಣೆಯ ಭದ್ರತೆಯ ಸಲುವಾಗಿ ಪಟ್ಟಣದ ತಹಸೀಲ್ ಕಚೇರಿಯಲ್ಲಿ ಕರ್ತವ್ಯದಲ್ಲಿ ಇದ್ದ ಪೆÇಲೀಸ ಪೇದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮಲ್ಲಿಕಾರ್ಜುನ ಪೆÇೀತೆಪೂರ (38) ಆತ್ಮಹತ್ಯೆ ಮಾಡಿಕೊಂಡ ಪೆÇಲೀಸ ಪೇದೆ.
ಗುರುವಾರ ಬೆಳಗಿನ ಜಾವ ತಹಸೀಲ್ ಕಚೇರಿಯ ಭದ್ರತೆಯ ಕರ್ತವ್ಯದಲ್ಲಿದ್ದ ಅವರು 303 ಬಂದೂಕಿನಿಂದ ಸ್ವತಃ ಫೈರಿಂಗ್ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಪೆÇಲೀಸ ಪೇದೆಯ ಚಲನ ವಲನದ ಕುರಿತು ತಹಸೀಲ್ ಕಚೇರಿಯಲ್ಲಿನ ಸಿಸಿ ಟಿವಿ ಪರಿಶೀಲನೆಯ ನಡೆಯುತ್ತಿದೆ.
ಜಿಲ್ಲಾ ಪೆÇಲೀಸ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ತನಿಖೆಕೈಗೊಳ್ಳಲಾಗುವದು ಎಂದು ಪೆÇಲೀಸ ಮೂಲಗಳು ತಿಳಿಸಿವೆ.