ತಹಸೀಲ್ದಾರ ಸಿಪಿಐ ನೇತೃತ್ವದಲ್ಲಿ ೬೦ ದ್ವಿಚಕ್ರ ವಾಹನ ವಶ

ಸಿರವಾರ.ಮೇ.೧-ದೇಶದಲ್ಲಿ ಕೊರೋನಾ ೨ನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ೧೪ ದಿನಗಳ ಕಾಲ ಲಾಕ್‌ಡೌನ್ ಜಾರಿಗೊಳಿಸಿದ್ದು ೧೦ ಗಂಟೆ ನಂತರ ಯಾರು ಓಡಾಡಬಾರದೂ ಎಂದು ನಿಯಮ ಜಾರಿಗೊಳಿಸಿ ನಿಷೇದಾಜ್ಞನೆ ವಿಧಿಸಿದರೂ ಜನರು ಕ್ಯಾರೆ ಎನ್ನದೇ ಅಡ್ಡದಿಡ್ಡಿಯಾಗಿ ಹೋಡಾಡುತ್ತಿದ್ದ ೬೦ಕ್ಕೂ ಹೆಚ್ಚು ದ್ವಿಚಕ್ರವಾಹನಗಳನ್ನು ತಹಸೀಲ್ದಾರ – ಪೊಲೀಸರ ನೇತೃತ್ವದಲ್ಲಿ ವಶಕ್ಕೆ ಪಡೆದು ದಂಡ ವಸೂಲಿ ಮಾಡಿದರು.
ಪಟ್ಟಣದ ಪೊಲೀಸ್ ಠಾಣೆ ಮುಂಭಾಗದ ಶುಕ್ರವಾರ ಹಾಗೂ ಇಂದು ಬೆಳಗ್ಗೆ ಮುಖ್ಯ ರಸ್ತೆಯಲ್ಲಿ ಸಿರವಾರ ಸಿಪಿಐ ಗುರುರಾಜ ಕಟ್ಟಿಮನಿ ಹಾಗೂ ತಹಸೀಲ್ದಾರ ವಿಜೇಂದ್ರ ಹುಲಿನಾಯಕ ನೇತೃತ್ವದಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ ತಡೆದು ಬೈಕ್‌ಗಳನ್ನು ವಶಕ್ಕೆ ಪಡೆದರಲ್ಲದೇ ದಂಡ ವಸೂಲಿ ಮಾಡಿ ನಂತರ ಬೈಕ್‌ಗಳನ್ನು ಬಿಡುಗಡೆ ಮಾಡಿದರೆ, ದಂಡ ಕಟ್ಟದೆ ಇರುವವರ ವಾಹನಗಳನ್ನು ಠಾಣೆಯಲ್ಲಿ ಇಡಲಾಗಿದೆ. ಮುಂದೆ ಈ ರೀತಿ ಮಾಡದಂತೆ, ಕೊವೀಡ್ ೧೯ ವೈರಸ್ ಬಗ್ಗೆ ರೋಗದ ಬಗ್ಗೆ ಎಚ್ಚರಿಕೆ ನೀಡಿದರು
ಆಸ್ಪತ್ರೆಗೆ ಹೊದರೂ ಬಿಟ್ಟಿಲ್ಲ:- ಅಡ್ಡಾದೀಡಿಯಾಗಿ ರಸ್ತೆಗೆ ದ್ವಿಚಕ್ರದ ಮೇಲೆ ಓಡಾಡುತ್ತಿರುವವರು ಪೊಲೀಸರಿಗೆ ದೊರೆತ ನಂತರ ಹೇಳುವ ಮೊದಲ ಮಾತು ಆಸ್ಪತ್ರಗೆ ಹೋಗಿದ್ದೆವು. ಆದರೆ ಕೇಲವರು ನಿಜವಾಗಿಯೂ ಆಸ್ಪತ್ರೆಗೆ ಹೋದರೂ ಸಹ ಅಂತವರನ್ನು ಸಹ ಪೊಲೀಸರು, ತಹಸೀಲ್ದಾರರು ವಾಹನಗಳನ್ನು ತಡೆದು ದಂಡ ಕಟ್ಟಿಸಿಕೊಂಡರು, ದೂರದ ಊರುಗಳಿಂದ ಆಗಿಸಿದವರು ಹಣ ಇಲ್ಲದೆ ಪರದಾಡಿದರೆ, ಕೇಲವರು ಯಾರು ಮಾಡಿದ ತಪ್ಪಿಗೆ ನಾವು ದಂಡ ಕಟ್ಟಬೇಕಾಗಿದೆ ಎಂದು ತಹಸೀಲ್ದಾರ ಹಾಗೂ ಪೊಲೀಸರ ಮೇಲೆ ಹಿಡಿ ಶಾಪ ಹಾಕುತ್ತಿದ್ದರು.
ಈ ಸಂದರ್ಭದಲ್ಲಿ ಪಿಎಸ್‌ಐ ಸುಜಾತ ನಾಯಕ,ಕಂದಾಯ ನಿರೀಕ್ಷಕ ಶ್ರೀನಾಥ, ಪೊಲೀಸ್ ಪೇದೆಗಳಾದ ದೇವಪ್ಪ, ಶ್ರೀನಿವಾಸ, ಶರಣಬಸವ, ಭೀಮರೆಡ್ಡಿ, ಹುಲ್ಲಪ್ಪ, ಇಸ್ಮಾಯಿಲ್, ಆಂಜನೇಯ, ಮಲ್ಲಪ್ಪ, ವಿಜಯ ಯಾದವ್ ಇದ್ದರು.